ಬೆಂಗಳೂರು : ಬೆಂಗಳೂರಿನ ಹೊಟೇಲ್ ನಲ್ಲಿ ನಡೆದ ಬಾಂಬ್ ಸ್ಪೋಟದ ಪ್ರಕರಣಕ್ಕೆ ಸಂಭಂಧಿಸಿದಂತೆ ಎನ್ ಐ ಏ ಅಧಿಕಾರಿಗಳ ತಂಡವು ಇಬ್ಬರು ಉಗ್ರರನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದೆ ಮಾರ್ಚ್ 1 ರಂದು ಬೆಂಗಳೂರಿನ ಕುಂದಲಹಳ್ಳಿಯ ದಿ ರಾಮೇಶ್ವರ ಕೆಫೆಯಲ್ಲಿ ಮಧ್ಯಾಹ್ನ 12.45 ರ ಸುಮಾರಿಗೆ ಬಾಂಬ್ ಸ್ಪೋಟವಾಗಿ 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು
ಬಾಂಬ್ ಸ್ಪೋಟ ನಡೆದು 42 ದಿನಗಳ ಇಬ್ಬರು ಉಗ್ರರನ್ನು ಬಂಧಿಸುವಲ್ಲಿ ಎನ್ ಐ ಎ ಯಶಸ್ವಿಯಾಗಿದ್ದು ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ ಉಗ್ರರನ್ನು ತೀರ್ಥಹಳ್ಳಿ ಮೂಲದ ಮುಸಾವೀರ್ ಸಾಜಿನ್ ಹಾಗೂ ಅಬ್ದುಲ್ ಮತೀನ್ ಎಂದು ಗುರುತಿಸಲಾಗಿದೆ ಬಾಂಬ್ ಸ್ಪೋಟದ ಆರೋಪಿಗಳ ಪತ್ತೆಗಾಗಿ ಎನ್ ಐ ಎ ತಂಡವು 10 ಲಕ್ಷ ರೂಪಾಯಿಗಳ ಬಹುಮಾನವನ್ನು ಕೂಡ ಘೋಷಿಸಿತ್ತು