Categories
ಬ್ರೇಕಿಂಗ್ ನ್ಯೂಸ್

ಸಿಗರೇಟಿಗೆ ಮಾದಕ ವಸ್ತು ಬೆರೆಸಿ ಸೇವನೆ : ಐವರ ಬಂಧನ

ಮ‌ಂಗಳೂರು : ಚಿಲಿಂಬಿ ಮಲರಾಯ ದೈವಸ್ಥಾನ ಬಳಿಯ ಲೇಔಟ್‌ನಲ್ಲಿ ಸಿಗರೇಟಿಗೆ ಮಾದಕ ವಸ್ತು ಬೆರೆಸಿ ಸೇವಿಸುತ್ತಿದ್ದ ಆರೋಪದಡಿ ಐವರನ್ನು ಉರ್ವ ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ಪಡಮಾರುತ್ತು ನಿವಾಸಿ ಅಜಿಲ್ ಸಾಜಿ (21), ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿ ಸಾಜಿಲ್ ಅಬ್ದುಲ್ ಸಮದ್ (21), ವಾರಪಳ್ಳಿ ಚಂಗನಸ್ಸೇರಿ ನಿವಾಸಿ ಅಬು ಥೋಮಸ್ (23), ಕೊಟ್ಟಾಯಂ ಜಿಲ್ಲೆ ಕಂಜಿಪಳ್ಳಿ ನಿವಾಸಿ ಅಶ್ವಿನ್ ಸಾಜಿ (20), ಮೂಡುಬಿದಿರೆ ವಾಲ್ಪಾಡಿಯ ಮೆಲ್ಸನ್ ಟೆಲ್ಲಿಸ್ (19) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.

ಸಿಗರೇಟಿಗೆ ಮಾದಕ ವಸ್ತು ಬೆರೆಸಿ ಸೇವಿಸುತ್ತಿದ್ದ ಆರೋಪದಡಿ ಐವರನ್ನು ಉರ್ವ ಠಾಣೆಯ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.