Home » ಎಪಿಕೆ ಲಿಂಕ್ ಡೌನ್‌ಲೋಡ್ : ವ್ಯಕ್ತಿಯ ಖಾತೆಯಿಂದ 10 ಲಕ್ಷ ರೂ.ಗಳ ವರ್ಗಾವಣೆ
 

ಎಪಿಕೆ ಲಿಂಕ್ ಡೌನ್‌ಲೋಡ್ : ವ್ಯಕ್ತಿಯ ಖಾತೆಯಿಂದ 10 ಲಕ್ಷ ರೂ.ಗಳ ವರ್ಗಾವಣೆ

by Kundapur Xpress
Spread the love

ಮಂಗಳೂರು : ಅಪರಿಚಿತರು ಕಳುಹಿಸಿದ ಎಪಿಕೆ ಲಿಂಕ್ ಡೌನ್‌ಲೋಡ್ ಮಾಡಿದ ವ್ಯಕ್ತಿಯ ಖಾತೆಯಿಂದ 10 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೆ.5ರಂದು ತನಗೆ ಬಂದ ಎಪಿಕೆ ಲಿಂಕ್‌ನ್ನು ಡೌನ್‌ಲೋಡ್ ಮಾಡಿದ್ದೆ. ಅದರಲ್ಲಿ ತನ್ನ ಮೊಬೈಲ್ ನಂಬರ್ ನಮೂದಿಸಿದ್ದರು.

ನಂತರ ಮತ್ತೊಂದು ಮೊಬೈಲ್ ಸಂಖ್ಯೆಯಿಂದ ಅಪರಿಚಿತರು ಪದೇ ಪದೇ ಫೋನ್ ಮಾಡಿ ಕೆವೈಸಿ ದಾಖಲಾತಿಗಳನ್ನು ಕೇಳುತ್ತಿದ್ದರು. ಆದರೆ ತಾನು ನಂಬರ್ ನೀಡಿರಲಿಲ್ಲ.

ಆದರೆ ಫೆ.6ರ ರಾತ್ರಿ 9:11ರಿಂದ 9.27ರ ಮಧ್ಯೆ ತನ್ನ ಯೂನಿಯನ್‌ ಬ್ಯಾಂಕ್ ಪದವು ಶಾಖೆ ಖಾತೆಯಿಂದ 10,00,000 ರೂ. ಗಳು ಹಂತ ಹಂತವಾಗಿ ಡೆಬಿಟ್ ಆಗಿರುವ ಬಗ್ಗೆ ಮೆಸೇಜ್ ಬಂದಿದೆ. ಎಪಿಕೆ ಲಿಂಕ್ ಮೂಲಕ ವೈಯಕ್ತಿಕ ಮಾಹಿತಿಯನ್ನು ಕದ್ದು ಹಣ ವರ್ಗಾಯಿಸಿಕೊಂಡಿರುವ ಬಗ್ಗೆ ವ್ಯಕ್ತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

 

Related Articles

error: Content is protected !!