ಮಂಗಳೂರು:ಕುದ್ರೋಳಿ ನಿವಾಸಿ ಮೊಹಮ್ಮದ್ ಸಿನಾನ್(24) ಕೊಲೆ ಯತ್ನ ಪ್ರಕರಣದಲ್ಲಿ ಕೋರ್ಟ್ ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಉರ್ವಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
2021 ರಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಿನಾನ್ ಕಳೆದ 2 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ಈತನ ವಿರುದ್ದ ಘನ ನ್ಯಾಯಾಲಯವು ವಾರೆಂಟ್ ಹೊರಡಿಸಿದ್ದು, ವಾರೆಂಟ್ ಜಾರಿ ಗೊಳಿಸುವ ಸಲುವಾಗಿ ಈತನ ವಿರುದ್ದ ಬ್ಯೂರೋ ಆಫ್ ಇಮಿಗ್ರೇಶನ್ ನವದೆಹಲಿ, ಭಾರತ ಸರಕಾರ ರವರಿಂದ ಎಲ್.ಓ.ಸಿ ತೆರೆಯಲಾಗಿದ್ದು.
ಕತಾರ್ ನಿಂದ ಮಂಗಳೂರಿಗೆ ವಿಮಾನ ಮುಖೇನಾ ಬಂದಿದ್ದು, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್ ಅಧಿಕಾರಿಗಳು ವಶಕ್ಕೆ ಪಡೆದು ಉರ್ವಾ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಆತನನ್ನು ಕರೆತಂದು ರಾತ್ರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ವಾರಂಟ್ ಅಸಾಮಿಯು ನ್ಯಾಯಾಲಯದ ಕಲಾಪಗಳಿಗೆ ಹಾಜರಾಗದೆ ನ್ಯಾಯಾಲಯದ ಜಾಮೀನಿನ ಆದೇಶವನ್ನು ಉಲ್ಲಂಘನೆ ಮಾಡಿದ ಬಗ್ಗೆ ಉರ್ವಾ ಪೊಲೀಸ್ ಠಾಣಾ ಪ್ರಕರಣವನ್ನು ದಾಖಸಲಾಗಿದೆ

