Home » ಮದುವೆ ಮನೆಯಲ್ಲಿ ವ್ಯಕ್ತಿ ಮೇಲೆ ಹಲ್ಲೆ
 

ಮದುವೆ ಮನೆಯಲ್ಲಿ ವ್ಯಕ್ತಿ ಮೇಲೆ ಹಲ್ಲೆ

by Kundapur Xpress
Spread the love

ವಿಟ್ಲ:ಅಬುಸಾಲಿ ಆದಂ ಕುಂಞ ಎಂಬವರು ಶಬೀರ್ ಯಾನೆ ಚಬ್ಬಿ ಅವರ ಮದುವೆಗೆ ಹೋದಾಗ ಅಬ್ದುಲ್ ರಹಿಮಾನ್ ಅವರ ಪ್ರಚೋದನೆಗೆ ರೈಯೀಸ್ ಎಂಬವರು ರಾಡ್‌ನಿಂದ ಹಣೆಗೆ ಹೊಡೆದು ಗಾಯಪಡಿಸಿದ್ದು, ಇತರ ಆರೋಪಿಗಳು ಸೇರಿ ಅಬುಸಾಲಿ ಆದಂ ಕುಂಞ ಅವರನ್ನು ನೆಲಕ್ಕೆ ದೂಡಿ ತುಳಿದು, ಕಲ್ಲು ಎಸೆದು ಕಾಲಿಗೆ ಗಾಯಪಡಿಸಿದ್ದಾರೆ. ಶಬೀ‌ರ್ ಅವರ ಮದುವೆಗೆ ಅಬುಸಾಲಿ ಆದಂ ಕುಂಞ ಸಹಕರಿಸಿದ್ದೇ ಘಟನೆಯ ಕಾರಣವಾಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಬುಸಾಲಿ ಆದಂ ಕುಂಞ ನೀಡಿದ ದೂರಿನ ಅನ್ವಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಅಹಮದ್ ರಈಸ್ ನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಈ ಪ್ರಕರಣಕ್ಕೆ ಸಂಬಂದಿಸಿದಂತೆ ಅಹಮದ್ ರಈಸ್ ರವರು ತನಗೆ ಅಲ್ಲಿ ಇದ್ದವರು ಸೇರಿ ಹಲ್ಲೆ ಮಾಡಿದ್ದಾರೆಂದು ಪ್ರತಿ ದೂರನ್ನು ನೀಡಿದ್ದು ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

Related Articles

error: Content is protected !!