78
ಬ್ರಹ್ಮಾವರ : ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕರ್ಣೆ ಗಾಂಧಿನಗರ ಬಸ್ ನಿಲ್ದಾಣದಲ್ಲಿ ಮಟ್ಕಾ ಜುಗಾರಿ ಆಟ ನಡೆಯುತ್ತಿರುವ ಮಾಹಿತಿ ಮೇರೆಗೆ, ಸಹಾಯಕ ಪೊಲೀಸ್ ಉಪನಿರೀಕ್ಷಕ ಜಯಕರ ಅವರ ನೇತೃತ್ವದಲ್ಲಿ ಪೊಲೀಸರು ಮಧ್ಯಾಹ್ನ ದಾಳಿ ನಡೆಸಿದರು.ಆ ವೇಳೆ, ಕುಮಾರ ಹೆಗ್ಡೆ (59) ಎಂಬಾತ ಸಾರ್ವಜನಿಕರನ್ನು ಕರೆದು “1 ರೂಪಾಯಿಗೆ 70 ರೂಪಾಯಿ ಸಿಗುತ್ತದೆ” ಎಂದು ಹೇಳಿ ಹಣ ಸಂಗ್ರಹಿಸುತ್ತಿದ್ದಾನೆಂದು ಪತ್ತೆಯಾಯಿತು.
ಪೊಲೀಸರು ಸ್ಥಳದಲ್ಲಿಯೇ ಆರೋಪಿಯನ್ನು ಬಂಧಿಸಿ, ಅವನ ವಶದಿಂದ 815 ನಗದು, ಮಟ್ಕಾ ನಂಬರಿನ ಚೀಟಿ, ಹಾಗೂ ಹಳದಿ ಬಣ್ಣದ ಪೆನ್ ವಶಪಡಿಸಿಕೊಂಡಿದ್ದಾರೆ.ಆರೋಪಿ ಸಂಗ್ರಹಿಸಿದ ಹಣವನ್ನು ಕರ್ಜೆಯ ಸಂತೋಷ್ ಶೆಟ್ಟಿ ಎಂಬಾತನಿಗೆ ನೀಡುತ್ತಿದ್ದಾನೆಂದು ಹೇಳಿಕೊಂಡಿದ್ದು, ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

