ಉಡುಪಿ :ಲೋನ್ ಆ್ಯಪ್ ನಲ್ಲಿ 12 ಸಾವಿರ ರೂಪಾಯಿ ಸಾಲ ಪಡೆದಿದ್ದ ಯುವಕನಿಂದ 4 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿದ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಆಟೋ ಮೊಬೈಲ್ ಇಂಜಿನಿಯರ್ ಕೆಲಸ ಮಾಡಿಕೊಂಡಿದ್ದ ಯುವಕನಿಗೆ ಒಂದು ತಿಂಗಳ ಹಣದ ಅವಶ್ಯಕತೆ ಬಂದಿತ್ತು, ಈ ಹಿನ್ನಲೆ ಮೊಬೈಲ್ ನಲ್ಲಿ SMART RUPIYA ONELINE LOAN APP ನಲ್ಲಿ 7 ದಿನದ ಲೋನ್ ಗೆ ಅಪ್ಲೇ ಮಾಡಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ,ಸೆಲ್ಸಿ ಪೋಟೋ ಮೊಬೈಲ್ ಲೋಕೇಶನ್, ಮೊಬೈಲ್ contact ಡಿಟೈಲ್ಸ್ ನ್ನು ಹಾಕಿ 12,000/- ಹಣ ಪಡೆದಿದ್ದಾರೆ. 7 ದಿನದ ಇಳಗೆ ಹಣ ವಾಪಾಸ್ಸು ಹಾಕಬೇಕಾಗಿರುವುದರಿಂದ 6 ದಿನದ ಒಳಗೆ ಸಾಲವಾಗಿ ಪಡೆದ 12,000 ಹಣವನ್ನು ಹಾಕಿರುತ್ತಾರೆ. ಬಳಿಕ ಅವರ ನಂಬರ್ ನಲ್ಲೇ ಹೆಚ್ಚು ಹೆಚ್ಚು ಲೋನ್ ಹಣವನ್ನು ಪಡೆದು ಯುವಕನ ಮೊಬೈಲ್ ನಂಬ್ರದಿಂದ ವಾಟ್ಸಾಫ್ ಮತ್ತು ಟೇಲಿಗ್ರಾಮ APP ಮೂಲಕ ಯಾರೋ ಅಪರಿಚಿತ ಸೈಬರ್ ವಂಚಕರು ಕರೆ ಮಾಡಿ ಹಣ ಹಾಕದಿದ್ದರೆ ಮೊಬೈಲ್ ಡಾಟಾ ನಮ್ಮ ಬಳಿ ಇದೇ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.ಯುವಕ ಹೆದರಿ ಹಂತಹಂತವಾಗಿ APPಮೂಲಕ 4,37,253 ರೂಪಾಯಿ ಹಾಕಿದ್ದಾನೆ. ಈ ಬಗ್ಗೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 216/2025 ಕಲಂ: 66(c), 66(d) IT ACT ರಂತೆ ಪ್ರಕರಣ ದಾಖಲಾಗಿರುತ್ತದೆ.

