ಕುಂದಾಪುರ : ಕುಂದಾಪುರ ಸಮೀಪದ ಆನಗಳ್ಳಿ ಸೇತುವೆ ಬಳಿಯ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ ಆನಗಳ್ಳಿ ಹೊಳೆಯಲ್ಲಿ ತೇಲುತ್ತಿರುವ ಮೃತದೇಹವನ್ನು ಕಂಡ ಸಾರ್ವಜನಿಕರು ಕುಂದಾಪುರ ಪೊಲೀಸ್ ಸ್ಟೇಷನ್‌ಗೆ ಸುದ್ದಿ ಮುಟ್ಟಿಸಿದ್ದಾರೆ
ತಕ್ಷಣ ಕಾರ್ಯಪ್ರವೃತ್ತರಾದ ನಗರ ಠಾಣೆಯ ಪಿ ಎಸ್ ಐ ಪ್ರಸಾದ್ ಕೆ ನೇತೃತ್ವದ ತಂಡ ಆನಗಳ್ಳಿಗೆ ಆಗಮಿಸಿ ಹೊಳೆಯಲ್ಲಿ ತೇಲುತ್ತಿರುವ ಮೃತದೇಹವನ್ನು ಕಂಡು ಸಾರ್ವಜನಿಕರ ಸಹಾಯದಿಂದ ದೋಣಿಯ ಮೂಲಕ ದಡಕ್ಕೆ ತಂದಿದ್ದಾರೆ
ಮೃತದೇಹದ ಪರ್ಸ್‌ನಲ್ಲಿ ದೊರೆತ ಡ್ರೈವಿಂಗ್ ಲೈಸೆನ್ಸ್‌ನಲ್ಲಿ ಬೆಂಗಳೂರಿನ ಹನುಮಂತ ನಗರ ನಿವಾಸಿ ಬನ್ನಪ್ಪನವರ ಪುತ್ರ ರಾಜು ಬಿ ಎಂದು ತಿಳಿದುಬಂದಿದೆ ಇದರೊಂದಿಗೆ ಅವರ ವಿಸಿಟಿಂಗ್ ಕಾರ್ಡ್ ಸಿಕ್ಕಿದ್ದು ಅದರಲ್ಲಿ ಅಡಿಗೆ ಗುತ್ತಿಗೆದಾರರು ಅನ್ನಪೂರ್ಣೇಶ್ವರೀ ಕೇಟರರ್ಸ್,ನಂ. 12, 4ನೇ ಮುಖ್ಯ ರಸ್ತೆ 13ನೇ ಅಡ್ಡ ರಸ್ತೆ ಎಲ್ಲಮ್ಮ ದೇವಸ್ಥಾನದ ಹತ್ತಿರ ಶ್ರೀನಿವಾಸ ನಗರ ಬೆಂಗಳೂರು ಎಂದು ನಮೂದಿಸಿದೆ

ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಕಾರ್ಯಾಚರಣೆಯಲ್ಲಿ ಪಿ ಎಸ್ ಐ ಪ್ರಸಾದ್ ಕೆ ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ ಹಸನ್ ಮಾಧವ ಹಾಗೂ ಮಧುಸೂಧನ್ ಪಾಲ್ಗೊಂಡಿದ್ದರು ಅವರೊಂದಿಗೆ ಕೆ ಎಸ್ ಸುಧೀರ್ ರಾಜೇಂದ್ರ ರಾಜಾ ದಿನೇಶ್ ಅರುಣ್ ಹಾಗೂ ವಿಲಿಯಂ ಮತ್ತು ಸಂಗಮ್ ಸ್ನೇಹಿತರು ಸಹಕರಿಸಿದ್ದಾರೆ
ಮೃತದೇಹವನ್ನು ಮಿತ್ರರೊಬ್ಬರು ಗುರುತಿಸಿದ್ದು ರಾಜು ಎಂಬವರು ಮರವಂತೆ ಸಮೀಪದ ನಾವುಂದದ ನಿವಾಸಿ ಎಂದು ತಿಳಿದು ಬಂದಿದ್ದು ಬೆಂಗಳೂರಿನಲ್ಲಿ ಕ್ಯಾಟರಿಂಗ್ ಮಾಡಿಕೊಂಡಿದ್ದರು ಎನ್ನಲಾಗಿದೆ

