ಕುಂದಾಪುರ : ಕುಂದಾಪುರ ನಗರದ ರಾಷ್ಟ್ರೀಯ ಹೆದ್ದಾರಿಯ ಸಂತೆ ಮಾರ್ಕೇಟ್ ಎದುರುಗಡೆಯ ಕೆಂಚಮ್ಮನ ಮನೆಯ ನಿವಾಸಿ ಕೆ ರವಿ ಎಂಬವರು ಹೃದಯಾಘಾತದಿಂದ ಇಂದು ಬೆಳಿಗ್ಗೆ ನಿಧನ ಹೊಂದಿದರು ಅವರಿಗೆ 53 ವರ್ಷ ವಯಸ್ಸಾಗಿತ್ತು
ರವಿ ಎಂಬವರು ಎಂದಿನಂತೆ ನಿನ್ನೆ ವ್ಯವಹಾರವನ್ನು ಮುಗಿಸಿ ಮನೆಗೆ ಆಗಮಿಸಿ ಊಟ ಮಾಡಿ ಮಲಗಿದ್ದರು ಇಂದು ಶನಿವಾರ ಮುಂಜಾನೆ 4.00 ಗಂಟೆಯ ವೇಳೆಗೆ ಉಸಿರಾಟದ ತೊಂದರೆಗೆ ಒಳಗಾಗಿದ್ದು ತಕ್ಷಣ ಅವರನ್ನು ಅಂಬುಲೆನ್ಸ್ ಮೂಲಕ ಮಣಿಪಾಲದ ಕೆ ಎಂ ಸಿ ಗೆ ಕರೆದೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ
ರವಿ ಅವರ ಮೃತದೇಹವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಅವರ ಅಂತ್ಯ ಸಂಸ್ಕಾರ ನಾಳೆ ಬೆಳಿಗ್ಗೆ ನಡೆಯಲಿದೆ ಎಂದು ಕುಟುಂಬಿಕರು ತಿಳಿಸಿದ್ದಾರೆ
ಕಳೆದ ಹಲವಾರು ವರ್ಷಗಳಿಂದ ಕುಂದಾಪುರ ನಗರದ ಮೀನು ಮಾರ್ಕೇಟ್ ಬಳಿಯಲ್ಲಿ ಕೋಳಿ ಮಾಂಸದ ವ್ಯವಹಾರ ನಡೆಸುತ್ತಿದ್ದ ರವಿಯವರು ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದು ರಾಮಕ್ಷತ್ರಿಯ ಯುವಕ ಮಂಡಳಿಯ ಆಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು
ಮೃತ ರವಿಯವರು ತಂದೆ ತಾಯಿ ಪತ್ನಿ ಪುತ್ರಿ ಸಹೋದರ ಹಾಗೂ 4 ಸಹೋದರಿಯರನ್ನು ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ