Home » ಪ್ರವಾಸಕ್ಕೆ ಬಂದ ಮೂವರು : ಓರ್ವ ನೀರುಪಾಲು
 

ಪ್ರವಾಸಕ್ಕೆ ಬಂದ ಮೂವರು : ಓರ್ವ ನೀರುಪಾಲು

by Kundapur Xpress
Spread the love

ಮಲ್ಪೆ: ಪ್ರವಾಸಿಗರೊಬ್ಬರು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ, ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಲ್ಪೆ ಬೀಚ್‌ನಲ್ಲಿ ನಡೆದಿದೆ.ಮೃತ ವ್ಯಕ್ತಿಯನ್ನು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಾರಸಂದ್ರದ ವೆಂಕಟಚಲ(40) ಎಂದು ಗುರುತಿಸಲಾಗಿದೆ.

ಸೋಮವಾರ ರಾತ್ರಿ ರಾಮನಗರದಿಂದ ಮೂವರು ಪ್ರವಾಸಕ್ಕೆಂದು ಹೊರಟಿದ್ದು, ಬೆಳಗ್ಗೆ ಮರವಂತೆ ಬೀಚ್‌ಗೆ ತೆರಳಿ, ಸಂಜೆ ಮಲ್ಪೆ ಬೀಚ್‌ಗೆ ಬಂದಿದ್ದರು.

ಮೂವರು ಸಮುದ್ರದಲ್ಲಿ ಈಜಾಡುತ್ತಿದ್ದು ಇವರಲ್ಲಿ ವೆಂಕಟಚಲ ಈಜುತ್ತ ಮುಂದೆ ಹೋಗಿ ಅಲೆಗಳ ಸೆಳೆತಕ್ಕೆ ಸಿಲುಕಿ ನೀರು ಪಾಲಾದರು. ತತ್‌ಕ್ಷಣ ಇಲ್ಲಿನ ಜೀವರಕ್ಷ ತಂಡದವರು ಅವರನ್ನು ಹಿಡಿದು ದಡ ಸೇರಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ಅ್ಯಂಬುಲೆನ್ಸ್‌ನಲ್ಲಿ ಉಡುಪಿಯ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತೀವ್ರ ಆಸ್ವಸ್ಥಗೊಂಡು ಅವರು ಆದಾಗಲೇ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದರು. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದೆ

 

Related Articles

error: Content is protected !!