97
ಉಡುಪಿ: ಸ್ಕೂಟರ್‌ನಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಕಾಪು ತಾಲೂಕಿನ ಬೆಳಪು ಗ್ರಾಮದ ವಿಜಯ ನಗರ ನಿವಾಸಿ ಮಹಮ್ಮದ್ ಅರ್ಫಾನ್(26)ಬಂಧಿತ ಆರೋಪಿ.
ಆರೋಪಿಯನ್ನು ಮಣಿಪಾಲದ ವಿದ್ಯಾರತ್ನ ನಗರದ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ನಂದಿನಿ ಮಿಲ್ಕ್ ಪಾರ್ಲರ್ ಬಳಿ ಬಂಧಿಸಿದ್ದಾರೆ.ಈತನಿಂದ 13000ರೂ. ಮೌಲ್ಯದ 6.61 ಗ್ರಾಂ ಮಾದಕ ವಸ್ತು ಎಂಡಿಎಂಎ, ಕೃತ್ಯಕ್ಕೆ ಬಳಸಿದ ಸ್ಕೂಟರ್, 60ಸಾವಿರ ರೂ. ಮೌಲ್ಯದ ಎರಡು ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

