Home » ಕಳ್ಳತನ ಪ್ರಕರಣ : ಆರೋಪಿಯೋರ್ವ ಎಸ್ಕೇಪ್
 

ಕಳ್ಳತನ ಪ್ರಕರಣ : ಆರೋಪಿಯೋರ್ವ ಎಸ್ಕೇಪ್

by Kundapur Xpress
Spread the love

ಕುಮಟಾ: ಕಳ್ಳತನ ಪ್ರಕರಣದ ಆರೋಪಿಯೋರ್ವ ಎಸ್ಕೇಪ್ ಆಗಿರುವ ಘಟನೆ ಕುಮಟಾದಲ್ಲಿ ನಡೆದಿದೆ. ಪಟ್ಟಣದ ಗಿಬ್ ಸರ್ಕಲ್ ಬಳಿಯ ಬ್ಯಾಟರಿ ಶಾಪ್ ಕಳ್ಳತನ ಪ್ರಕರಣದಲ್ಲಿ ಕುಮಟಾ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಆರೋಪಿಗಳನ್ನ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದರು ವಾಪಸ್ ತೆರಳುವಾಗ ಓರ್ವ ಆರೋಪಿ ಪೊಲೀಸ್‌ರ ಕೈಯಿಂದ ತಪ್ಪಿಸಿಕೊಂಡು ಆಸ್ಪತ್ರೆಯ ಕಂಪೌಂಡ್ ಹಾರಿ ಎಸ್ಕೆಪ್ ಆಗಿದ್ದಾನೆ.

ಪರಾರಿಯಾದ ಆರೋಪಿಯನ್ನ ಹಿಡಿಯಲು ಹೋದ ಪೊಲೀಸರು ಕೂಡ ಕಂಪೌಂಡ್ ಜಿಗಿಯುವಾಗ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಕತ್ತಲಾದ ಕಾರಣ ಆರೋಪಿ ಯಾವ ಕಡೆ ಓಡಿ ಹೋದ ಎಂದು ಗೊತ್ತಾಗಿಲ್ಲ. ಪರಾರಿಯಾದ ಆರೋಪಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಭಾವಚಿತ್ರದಲ್ಲಿರುವ ಈ ಆರೋಪಿ ಕಂಡುಬಂದರೆ ‘ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08386-222333 ನಂಬರ್‌ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

 

Related Articles

error: Content is protected !!