ಕುಂದಾಪುರ : ಆಹಾರ ನಿರೀಕ್ಷಕರಾದ ಹೆಚ್.ಎಸ್. ಸುರೇಶ್ (49) ಅವರಿಗೆ ನಿನ್ನೆ ಬೆಳಿಗ್ಗೆ 11:30 ಗಂಟೆಗೆ ಸರ್ಕಾರದಿಂದ ನೀಡಲಾದ ಉಚಿತ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿತು.ಈ ಹಿನ್ನೆಲೆಯಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪಿಎಸ್ಐ ಹಾಗೂ ಸಿಬ್ಬಂದಿ ಪಂಚರೊಂದಿಗೆ ಶಂಕರನಾರಾಯಣ-ಹಾಲಾಡಿ ರಸ್ತೆಯ Essar ಪೆಟ್ರೋಲ್ ಪಂಪ್ ಬಳಿ ಬಲೆಯೊಡ್ಡಿದರು. ಸುಮಾರು 12:15 ಗಂಟೆಗೆ KA-19-D-3296 ನೇ ಓಮಿನಿ ಕಾರು ಬಂದಾಗ ನಿಲ್ಲಿಸಿ ಪರಿಶೀಲಿಸಲಾಯಿತು.
ಚಾಲಕನಾದ ವಾಸೀಂ ಅಕ್ರಂ (36), ಹಾರಾಡಿ ಗ್ರಾಮ, ಬ್ರಹ್ಮಾವರ ಎಂದು ಗುರುತಿಸಲಾಯಿತು. ಕಾರನ್ನು ಪರಿಶೀಲಿಸಿದಾಗ:
• ವಿದ್ಯುತ್ ಚಾಲಿತ ಸ್ಕೇಲ್ – 1
• ಅಕ್ಕಿ ತುಂಬಿದ ಪಾಲಿಥೀನ್ ಚೀಲಗಳು – 12
• ಖಾಲಿ ಪಾಲಿಥೀನ್ ಚೀಲಗಳು – 3
• ಖಾಲಿ ಸರ್ಕಾರಿ ಅನ್ನಭಾಗ್ಯ ಗೋಣಿ ಚೀಲಗಳು – 2 ಪತ್ತೆಯಾದವು.
ಪರಿಶೀಲನೆ ವೇಳೆ 12 ಚೀಲಗಳಲ್ಲಿ ಪ್ರತಿಯೊಂದು 50 ಕೆಜಿ ತೂಕದ ಅಕ್ಕಿ ಇದ್ದು,
• 10 ಚೀಲಗಳಲ್ಲಿ ಕೊಚ್ಚಿಗೆ ಅಕ್ಕಿ (ಒಟ್ಟು 5 ಕ್ವಿಂಟಾಲ್)
• 2 ಚೀಲಗಳಲ್ಲಿ ಬೆಳ್ತಿಗೆ ಅಕ್ಕಿ (ಒಟ್ಟು 1 ಕ್ವಿಂಟಾಲ್) ಪತ್ತೆಯಾಗಿದೆ.
ಒಟ್ಟು 6 ಕ್ವಿಂಟಾಲ್ ಅಕ್ಕಿಯ ಮೌಲ್ಯ ₹13,800,
ಓಮಿನಿ ಕಾರಿನ ಅಂದಾಜು ಮೌಲ್ಯ ₹50,000,
ವಿದ್ಯುತ್ ಸ್ಕೇಲ್ ₹1,500 ಸೇರಿದಂತೆ ಎಲ್ಲ ವಸ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 88/2025 ರಂತೆ
ಕಲಂ 3, 6, 7 – Essential Commodities Act, 1955 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

