ಕುಂದಾಪುರ : ನಗರದ ಖಾರ್ವಿಕೇರಿ ನಿವಾಸಿ ಪ್ರಸ್ತುತ ನೇರಂಬಳ್ಳಿಯಲ್ಲಿ ನೆಲೆಸಿರುವ ಧಾರ್ಮಿಕ ಮುಖಂಡ ಹಾಗೂ ಸಮಾಜ ಸುಧಾರಕರಾದ ಜಯಾನಂದ ಖಾರ್ವಿಯವರು ತೀವ್ರ ಹೃದಯಾಘಾತದಿಂದ ಇಂದು ಮುಂಜಾನೆ 3.00 ಗಂಟೆಯ ವೇಳೆಗೆ ನಿಧನ ಹೊಂದಿದರು ಅವರಿಗೆ 64 ವರ್ಷ ವಯಸ್ಸಾಗಿತ್ತು ಇವರು ಪತ್ನಿ ಶ್ರೀಮತಿ ಶಾರದಾ ಮಗ ಭರತ್ ನಿಶಾನ್ ಮಗಳು ನಿಹಾರಿಕಾಳನ್ನುಅಗಲಿದ್ದಾರೆ
ಭಂಡಾರಕಾರ್ಸ್ ಕಾಲೇಜುನಲ್ಲಿ ಪದವಿ ಪಡೆದು ವಾಲಿಬಾಲ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಡಿದ್ದರು ಕೊಂಕಣಿ ಖಾರ್ವಿ ಸಮಾಜದ ಪ್ರತಿಷ್ಠಿತ ಶ್ರೀ ಮಹಾಕಾಳಿ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.ವಿದ್ಯಾರಂಗ ಮಿತ್ರ ಮಂಡಳಿ(ರಿ)ಯ ವಿದ್ಯಾನಿಧಿ ಯೋಜನೆಯ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ವಿದ್ಯಾರ್ಥಿಗಳಿಗೆ ವಿನೂತನವಾದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ಕಾರ್ಯಾಗಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು
ಗುತ್ತಿಗೆದರಾರದ ಅವರು ಹಲವಾರು ವರ್ಷಗಳಿಂದ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಅವರ ನಿಧನಕ್ಕೆ ಕೊಂಕಣ ಖಾರ್ವಿ ಸಮಾಜ ಭಾಂಧವರು ಹಾಗೂ ವಿವಿಧ ಧಾರ್ಮಿಕ ಮುಖಂಡರು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ

