195
ಬೈಂದೂರು : ಸಾಕು ನಾಯಿಯನ್ನು ಅದರ ಮಾಲಕನೇ ಬೈಕಿಗೆ ಕಟ್ಟಿ 2 ಕಿ.ಮೀ. ಎಳೆದೊಯ್ದ ವಿಕೃತ ಘಟನೆ ಬೈಂದೂರಿನಲ್ಲಿ ನಡೆದಿದೆ. ಶನಿವಾರ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದ್ದು ಈ ದುಷ್ಟನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನು ನೋಡಿದವರು ಬೈಕು ಸವಾರನನ್ನು ತಡೆದು ನಿಲ್ಲಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆರಂಭದಲ್ಲಿ ಆತ ಇದು ನಾನು ಸಾಕಿದ ನಾಯಿ, ನನ್ನಿಷ್ಟ ಎಂದೆಲ್ಲಾ ಸಮರ್ಥಿಸುವ ಪ್ರಯತ್ನ ಮಾಡಿದ್ದ. ಕೊನೆಗೆ ಸ್ಥಳೀಯರು ನಾಯಿಯ ಸರಪಳಿ ಬಿಚ್ಚಿ ಅದನ್ನು ರಕ್ಷಿಸಿದ್ದಾರೆ. ಅಷ್ಟರಲ್ಲಿ ಆತ ಜೀವಂತ ನಾಯಿಯ ಕುತ್ತಿಗೆ ಸರಪಣಿ ಕಟ್ಟಿ ಅದನ್ನು 2 ಕಿ.ಮೀ.ಗಳವರೆಗೆ ಎಳೆದೊಯ್ದಿದ್ದ, ನಾಯಿ ತೀವ್ರ ಗಾಯಗೊಂಡಿತ್ತು. ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.

