Home » ಗಂಗೊಳ್ಳಿ : ಲೈಸೆನ್ಸ್ ಬಂದೂಕು ಕಳವು
 

ಗಂಗೊಳ್ಳಿ : ಲೈಸೆನ್ಸ್ ಬಂದೂಕು ಕಳವು

by Kundapur Xpress
Spread the love

ಗಂಗೊಳ್ಳಿ: ಮನೆಯಲ್ಲಿ ಇಡಲಾಗಿದ್ದ ಲೈಸೆನ್ಸ್ ಹೊಂದಿದ SBBL ಬಂದೂಕನ್ನು ಕಳ್ಳರು ಕಳವು ಮಾಡಿರುವ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೂಜಾಡಿ ಗ್ರಾಮದ ಡಾ| ವೀಲ್ಸಿ ಥೋಮಸ್‌ ಅವರು ಕೃಷಿ ಭೂಮಿಯ ಬೆಳೆ ರಕ್ಷಣೆಗಾಗಿ 2013ರಲ್ಲಿ ಕುಂದಾಪುರ ತಹಶೀಲ್ದಾರರಿಂದ ಗನ್ ಲೈಸೆನ್ಸ್ ನಂ. 286/2 ಪಡೆದು SBBL ಬಂದೂಕನ್ನು ಹೊಂದಿದ್ದರು. ಲೈಸೆನ್ಸ್‌ 31/12/2027ರವರೆಗೆ ಮಾನ್ಯವಾಗಿರುತ್ತದೆ.

ದಿನಾಂಕ 01/04/2026 ರಂದು ರಾತ್ರಿ 8 ಗಂಟೆಗೆ ಪ್ರಾರ್ಥನೆಗೆ ತೆರಳುವ ಮುನ್ನ ಮನೆಯ ಕೋಣೆಯಲ್ಲಿ ಬಂದೂಕು ಯಥಾಸ್ಥಿತಿಯಲ್ಲಿ ಇತ್ತು. ಬಳಿಕ ದಿನಾಂಕ 18/04/2026 ರಂದು ಮಧ್ಯಾಹ್ನ 12 ಗಂಟೆಗೆ ಕೃಷಿ ಉತ್ಪನ್ನಗಳನ್ನು ಹಾಳು ಮಾಡುತ್ತಿದ್ದ ಮಂಗಗಳನ್ನು ಓಡಿಸಲು ಬಂದೂಕು ತೆಗೆದುಕೊಳ್ಳಲು ಹೋದಾಗ, ಇಟ್ಟಿದ್ದ ಸ್ಥಳದಲ್ಲಿ ಅದು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.

ಪಿರ್ಯಾದಿದಾರರು ಮನೆಯಲ್ಲಿ ಇಲ್ಲದ ಸಮಯವನ್ನು ಗಮನಿಸಿದ ಕಳ್ಳರು ಮನೆ ಪ್ರವೇಶಿಸಿ ಲೈಸೆನ್ಸ್ ಬಂದೂಕನ್ನು ಕಳವು ಮಾಡಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ.

ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

Related Articles

error: Content is protected !!