ಕುಂದಾಪುರ : ನಗರದ ವಡೇರಹೋಬಳಿಯ ನೆಹರು ಮೈದಾನದ ಹಿಂಬದಿಯಲ್ಲಿರುವ ಸಲೀಂ ಆಲಿ ರಸ್ತೆಯ ನಿವಾಸಿಯಾಗಿರುವ ಕುಂದಾಪುರ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ರಾಜೇಶ್ ಬೇಲಿಕೆರೆಯವರ ಮನೆ ಹಾಗೂ ಕಚೇರಿ ಮೇಲೆ ಇಂದು ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ
ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿರುವ ರಾಜೇಶ್ ರವರ ಮನೆ ಉಡುಪಿಯ ಕಚೇರಿ ಹಾಗೂ ಕುಂದಾಪುರ ನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಿ ತೀವೃ ತಪಾಸಣೆ ನಡೆಸುತ್ತಿದ್ದಾರೆ ಇಂದು ಬೆಳಿಗ್ಗೆ ನಾಲ್ಕು ಕಾರುಗಳಲ್ಲಿ ಬಂದ ಲೋಕಾಯುಕ್ತ ಪೊಲೀಸರು ವಿಚಾರಣೆ ಕೈಗೊಂಡು ತಪಾಸಣೆ ನಡೆಸುತ್ತಿದ್ದು ಮಂಗಳೂರು ಲೋಕಾಯುಕ್ತ ಎಸ್ ಪಿ ಸೈಮನ್ ಹಾಗೂ ಉಡುಪಿ ಲೋಕಾಯುಕ್ತ ಡಿ ವೈ ಎಸ್ ಪಿ ಪ್ರಕಾಶ್ ಪಾಲ್ಗೊಂಡಿದ್ದಾರೆ