ಕುಂದಾಪುರ : ಖ್ಯಾತ ಯಕ್ಷಗಾನ ಭಾಗವತರಾದ ಗಾನ ಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ್ ರವರು ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನ ಹೊಂದಿದರು ಅವರು ಪತ್ನಿ ಸುಜಾತ ಹಾಗೂ ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ
ಶ್ರೀ ಅನಂತ ಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿ ಪೇರ್ಡೂರು ಮೇಳದಲ್ಲಿ ಸುಮಾರು 40 ವರ್ಷಗಳಿಗೂ ಹೆಚ್ಚು ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ್ದ ಅವರು ಹಂಗಾರಕಟ್ಟೆ ಯಕ್ಷಗಾನ ಕೇಂದ್ರ ಕೋಟದ ನಾರಾಯಣ ಉಪ್ಪೂರುರವರಲ್ಲಿ ಭಾಗವತಿಕೆಯನ್ನು ಕಲಿತಿದ್ದರು
ಅಂದಿನ ಕಾಲದ ಭಾಗವತರಾದ ಕಾಳಿಂಗ ನಾವುಡರಿಗೆ ಸರಿಸಮಾನವಾದ ಪ್ರಸಿದ್ಧಿಯನ್ನು ಹೊಂದಿದ್ದ ಅವರು ಬಡಗುತಿಟ್ಟಿನ ಎಲ್ಲಾ ಮೇರು ಕಲಾವಿದರನ್ನು ತನ್ನ ಭಾಗವತಿಕೆಯ ಮೂಲಕ ಕುಣಿಸಿ ಬಡಗುತಿಟ್ಟಿನ ದಿಗ್ಗಜ ಭಾಗವತರ ಸಾಲಿನಲ್ಲಿ ಮಿಂಚಿದ್ದರು
ಸರಳ ಸಜ್ಜನ ವ್ಯಕ್ತಿತ್ವದ ಇವರು ಹಳೇ ಮತ್ತು ಹೊಸ ಪ್ರಸಂಗ ಎರಡರಲ್ಲೂ ಪ್ರಭುತ್ವ ಸಾಧಿಸಿದ್ದರು ಅನೇಕ ಯಕ್ಚಗಾನ ಕಾರ್ಯಕ್ರಮದ ಹಾಗೂ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದ ಇವರಿಗೆ ನೂರಾರು ಪ್ರಶಸ್ತಿಗಳು ಒಲಿದು ಬಂದಿದೆ
ಸುಬ್ರಹ್ಮಣ್ಯ ಧಾರೇಶ್ವರರವರು ಬೆಂಗಳೂರಿನಲ್ಲಿ ನಿಧನರಾಗಿದ್ದು ಇಂದು ಸಂಜೆ ಅವರ ಪ್ರಾರ್ಥಿವ ಶರೀರವು ಸ್ವಗೃಹ ಕಿರಿಮಂಜೇಶ್ವರಕ್ಕೆ ಬರಲಿದೆ