83
ಅಂಕೋಲಾ : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡುಗೆ ಎಣ್ಣೆ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ನೂರಾರು ಲೀಟರ್ ಅಡುಗೆ ಎಣ್ಣೆ ರಸ್ತೆ ಪಾಲಾಗಿದೆ. ಘಟನೆಯಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು. ಹುಬ್ಬಳ್ಳಿಯಿಂದ ಗೋವಾದತ್ತ ಸಾಗುತ್ತಿದ್ದ ಪ್ರಿಯಾ ಆಯಿಲ್ ಕಂಪನಿಯ ಗೂಡ್ಸ್ ಲಾರಿ ರಸ್ತೆ ಬದಿಗೆ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದ ಎಣ್ಣೆ ಡ್ರಮ್‌ಗಳು ರಸ್ತೆಗೆ ಬಿದ್ದಿವೆ.
ಘಟನಾ ಸ್ಥಳಕ್ಕೆ ಅಂಕೋಲಾ ಠಾಣೆಯ ಪೋಲಿಸರು ತಕ್ಷಣವೇ ಭೇಟಿ ನೀಡಿ, ಸಂಚಾರ ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರೆ.

