Home ಬ್ರೇಕಿಂಗ್ ನ್ಯೂಸ್ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಯುವಕ ಮೃತ್ಯು

ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಯುವಕ ಮೃತ್ಯು

by Kundapur Xpress

ಉಳ್ಳಾಲ : ಅಮೀ‌ರ್ ಎಂಬಾತ ಕೂಲಿ ಕೆಲಸ ಮಾಡಿಕೊಂಡಿದ್ದು, ಶಂಶೀರ್, ಇಕ್ಬಾಲ್ ಮತ್ತು ರಿಜ್ವಾನ್ ಅವರ ಜತೆ ಸಜೀಪಮೂಡ ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಕೆಲಸಕ್ಕೆ ಹೋಗಿದ್ದು, ಸಂಜೆ ಕೆಲಸ ಮುಗಿಸಿ ಅಲ್ಲೇ ಸಮೀಪದಲ್ಲಿದ್ದ ನೀರು ತುಂಬಿದ್ದ ಹೊಂಡಕ್ಕೆ ಕೈಕಾಲು ಮುಖ ತೊಳೆಯಲು ಹೋದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಗಂಭೀರ ಸ್ಥಿತಿಯಲ್ಲಿದ್ದ ಅಮೀರ್ ನನ್ನು ಕೂಡಲೇ ದೇರಳಕಟ್ಟೆಯ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಮೃತಪಟ್ಟಿದ್ದರು. ಘಟನೆಯ ಕುರಿತು ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles