Home » ನವಮಂಗಳೂರು ಬಂದರಿಗೆ ಅಮೆರಿಕದ ಟೆಕ್ಸಾಸ್‌ನಿಂದ 16,714 ಮೆಟ್ರಿಕ್ ಟನ್ ಎಲ್‌ಪಿಜಿ (LPG)
 

ನವಮಂಗಳೂರು ಬಂದರಿಗೆ ಅಮೆರಿಕದ ಟೆಕ್ಸಾಸ್‌ನಿಂದ 16,714 ಮೆಟ್ರಿಕ್ ಟನ್ ಎಲ್‌ಪಿಜಿ (LPG)

by Kundapur Xpress
Spread the love

ಮಂಗಳೂರು : ಅಮೆರಿಕದ ಟೆಕ್ಸಾಸ್‌ನಿಂದ 16,714 ಮೆಟ್ರಿಕ್ ಟನ್ ಎಲ್‌ಪಿಜಿ (LPG) ಹೊತ್ತ ಬೃಹತ್ ಕಾರ್ಗೋ ಹಡಗು ಮಂಗಳೂರಿನ ನವಮಂಗಳೂರು ಬಂದರಿಗೆ ಯಶಸ್ವಿಯಾಗಿ ತಲುಪಿದೆ.

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿಯಿಂದಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಆತಂಕದ ನಡುವೆ ಆಗಮಿಸಿದ ಮೊದಲ ವಿದೇಶಿ ಹಡಗು ಇದಾಗಿದೆ.
ಮಾರ್ಚ್ 14 ರಂದು ಅಮೆರಿಕದಿಂದ ಹೊರಟಿದ್ದ ಈ ನೌಕೆ, ಸುರಕ್ಷಿತವಾಗಿ ಕರಾವಳಿ ತೀರಕ್ಕೆ ಬಂದಿಳಿದಿದೆ.ಕಳೆದ ಕೆಲವು ದಿನಗಳಿಂದ ರಾಜ್ಯದಾದ್ಯಂತ ಅಡುಗೆ ಅನಿಲ (LPG) ಪೂರೈಕೆಯಲ್ಲಿ ಅಲ್ಪಮಟ್ಟಿನ ವ್ಯತ್ಯಯ ಹಾಗೂ ಅಭಾವ ತಲೆದೂರಿತ್ತು. ಇದೀಗ ಇಷ್ಟು ದೊಡ್ಡ ಪ್ರಮಾಣದ ಅನಿಲ ಸಂಗ್ರಹ ಬಂದಿರುವುದರಿಂದ, ರಾಜ್ಯದಲ್ಲಿ ಸಿಲಿಂಡರ್ ವಿತರಣೆ ಸುಗಮಗೊಳ್ಳುವ ನಿರೀಕ್ಷೆಯಿದೆ.

 

Related Articles

error: Content is protected !!