ಮಂಗಳೂರು: ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದ ಯುವತಿ ನಾಪತ್ತೆ ಯಾಗಿರುವ ಘಟನೆ ಮಂಗಳೂರಿನ ಮುಲ್ಕಿಯಲ್ಲಿ ನಡೆದಿದೆ ಎಸ್ ಕೋಟಿ ನಿವಾಸಿ ಅಶೋಕ್ ಎಂಬವರ ಮಗಳು ವಿದ್ಯಾರ್ಥಿನಿ ದುರ್ಗಾಶ್ರೀ (20) ನಾಪತ್ತೆಯಾದಾಕೆ
ದುರ್ಗಾಶ್ರೀ ಪ್ರತೀ ದಿನ ತನ್ನ ಮನೆಯಿಂದ ಎಸ್ ಕೋಟಿ ಬಸ್ ನಿಲ್ದಾಣದವರೆಗೆ ತಂದೆಯ ಸ್ಕೂಟರ್ ನಲ್ಲಿ ಬಂದು ಬಳಿಕ ಅಲ್ಲಿಂದ ಕಾಲೇಜಿಗೆ ತೆರಳುತ್ತಿದ್ದಳು ಎಂದಿನಂತೆ ಜೂ.15 ಬೆಳಿಗ್ಗೆ ದುರ್ಗಾಶ್ರೀ ಯನ್ನು ತಂದೆ ಬಸ್ ನಿಲ್ದಾಣಕ್ಕೆ ಬಿಟ್ಟು ತೆರಳಿದ್ದಾರೆ ಆ ಬಳಿಕ ಆಕೆ ಸಂಜೆಯಾದರೂ ಮನೆಗೆ ಹಿಂದಿರುಗದೆ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ