388
ಕುಂದಾಪುರ : ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾದ ದಿನೇಶ್ ಹೆಗ್ಡೆ ಮೊಳಹಳ್ಳಿಯವರು ತನ್ನ ಬೆಂಬಲಿಗರು ಹಾಗೂ ಪಕ್ಷದ ವಿವಿಧ ಗಣ್ಯರೊಂದಿಗೆ ಅಸಿಸ್ಟೆಂಟ್ ಕಮೀಷನರ್‍ರವರ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿ ಪತ್ರಕರ್ತ ರ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಮೊಳಹಳ್ಳಿಯವರು ಬಿಜೆಪಿಯಿಂದ ಹಾಲಾಡಿ ಶ್ರೀನಿವಾಸ್ ಶೆಟ್ಟರು ಸ್ಪರ್ಧಿಸುತ್ತಿದ್ದು ಅವರ ವಿರುದ್ಧವೇ ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ ಹಾಗಾಗಿ ಶ್ರೀನಿವಾಸ್ ಶೆಟ್ಟರ ಯಾವುದೇ ಪ್ರಚಾರದಿಂದ ಯಾವುದೇ ತೊಂದರೆಯಾಗುವುದಿಲ್ಲ ಗೆಲುವು ನಮ್ಮದೇ ಎಂದು ಅವರು ಹೇಳಿದರು.

