Home » ಹೈವೇ ಸಂಚಾರಿಗಳೇ ಎಚ್ಚರ.. ಎಚ್ಚರ….
 

ಹೈವೇ ಸಂಚಾರಿಗಳೇ ಎಚ್ಚರ.. ಎಚ್ಚರ….

by Kundapur Xpress
Spread the love

ಕುಂದಾಪುರ : ರಾಷ್ಟ್ರೀಯ ಹೆದ್ದಾರಿಯಲ್ಲಿ ಆಯಿಲ್‌ ಟ್ಯಾಂಕರ್‌ನಿಂದ ರಸ್ತೆ ತುಂಬಾ ಆಯಿಲ್‌ ಸೋರಿಕೆಯಾಗಿದ್ದು ಹಲವು ಅವಘಡಗಳುಇಂದು ಬೆಳಗ್ಗಿನ ಜಾವದಲ್ಲಿ ಸಂಭವಿಸಿದೆ

ತೆಕ್ಕಟ್ಟೆಯಿಂದ ಶಿರೂರಿನ ತನಕ ಟ್ಯಾಂಕರ್‌ನಿಂದ ಆಯಿಲ್‌ ಸೋರಿಕೆಯಾಗಿದ್ದು ತೆಕ್ಕಟ್ಟೆ ಕೋಟೇಶ್ವರ ಕುಂದಾಪುರ ತಲ್ಲೂರು ಹೆಮ್ಮಾಡಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನೇಕ ಬೈಕ್‌ ಗಳು ಸ್ಕಿಡ್‌ ಆಗಿ ರಸ್ತೆಯಲ್ಲಿ ಬಿದ್ದ ದೃಶ್ಯ ಸಾಮಾನ್ಯವಾಗಿದ್ದು ಹಲವರಿಗೆ ಕೈ ಕಾಲು ಮೈ ತರಚಿದ ಗಾಯವಾಗಿದೆ ಹಲವು ಕಾರು ಬಸ್‌ ಮತ್ತಿತರ ವಾಹನಗಳು ಸ್ಕಿಡ್‌ ಆಗಿ ಡಿವೈಡರ್ ಮೇಲೇರಿದ ಘಟನೆ ನಡೆದಿದೆ

ಅಲ್ಲಲ್ಲಿ ಸಾರ್ವಜನಿಕರೇ ಹೈವೇ ಬದಿಯಲ್ಲಿ ನಿಂತು ವಾಹನ ಸವಾರರಿಗೆ ರಸ್ತೆಯಲ್ಲಿ ಆಯಿಲ್‌ ಚೆಲ್ಲಿದ ಬಗ್ಗೆ ಮಾಹಿತಿ ನೀಡಿ ಎಚ್ಚರಿಸುತ್ತಿದ್ದಾರೆ ಸುದ್ದಿ ತಿಳಿದ ಪೊಲೀಸರು ಆಯಿಲ್‌ ಟ್ಯಾಂಕರ್‌ನ್ನು ಶಿರೂರು ಟೋಲ್‌ಗೇಟ್‌ನಲ್ಲಿ ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದು ಹೈವೇಯಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರ ವಹಿಸಬೇಕಾಗಿ ವಿನಂತಿಸಲಾಗಿದೆ

 

Related Articles

error: Content is protected !!