Home » ಲೈಂಗಿಕ ಕಿರುಕುಳ:ನಟಿ ಆಶಿಕಾ ರಂಗನಾಥ್ ಅವರ ಮಾವನ ಮಗಳು ಆತ್ಮಹತ್ಯೆ
 

ಲೈಂಗಿಕ ಕಿರುಕುಳ:ನಟಿ ಆಶಿಕಾ ರಂಗನಾಥ್ ಅವರ ಮಾವನ ಮಗಳು ಆತ್ಮಹತ್ಯೆ

by Kundapur Xpress
Spread the love

ಬೆಂಗಳೂರು :ಯುವಕನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ನಟಿ ಆಶಿಕಾ ರಂಗನಾಥ್ ಅವರ ಮಾವನ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಚಲ(22) ಆತ್ಮಹತ್ಯೆಗೆ ಶರಣಾದವರು. ಹಾಸನ ಮೂಲದ 22 ವರ್ಷದ ಅಚಲ ಇಂಜಿನಿಯರಿಂಗ್ ಪದವೀಧರೆ. ಬೆಂಗಳೂರಿನ ಪಾಂಡುರಂಗ ನಗರದ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಾನು ಅಚಲಳನ್ನು ಮದುವೆಯಾಗುತ್ತೇನೆಂದು ಮಾಯಾಂಕ್ ಅಚಲ ಪೋಷಕರನ್ನು ಒಪ್ಪಿಸಿದ್ದನು. ಅದೇ ಸಲುಗೆಯಲ್ಲಿ ಲೈಂಗಿಕ ಸಂಪರ್ಕಕ್ಕೆ ಮಾಯಾಂಕ್ ಪೀಡಿಸುತ್ತಿದ್ದನು. ಇದಕ್ಕೆ ಒಪ್ಪದ್ದಕ್ಕೆ ಅಚಲ ಆಕೆಯ ಮೇಲೆ ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ನೀಡುತ್ತಿದ್ದರಿಂದ ಮನನೊಂದು ಅಚಲ ನೇಣಿಗೆ ಶರಣಾಗಿದ್ದಾಳೆ ಎಂದು ಪೋಷಕರು ಪುಟ್ಟೇನಹಳ್ಳಿ ಠಾಣೆಯಲ್ಲಿ ಮಯಾಂಕ್ ಹಾಗೂ ಆತನ ತಾಯಿ ವಿರುದ್ಧ ದೂರು ನೀಡಿದ್ದಾರೆ.

 

Related Articles

error: Content is protected !!