69
ಮಲ್ಪೆ: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರೊಬ್ಬರು ಆಕಸ್ಮಿಕವಾಗಿ ಬೋಟಿನಿಂದ ನೀರಿಗೆ ಬಿದ್ದು ನಾಪತ್ತೆಯಾಗಿರುವ ಘಟನೆ ನಡೆದಿದೆ.
ನಾಗಲಿಂಗಮ್ (51) ನಾಪತ್ತೆಯಾದವರು ಎಂದು ತಿಳಿದು ಬಂದಿದೆ.
ಇವರು ಇಮ್ಯಾನುವೆಲ್ ಕಿರಣ ಎಂಬವರ ರಾಯಲ್ ಫಿಶರಿಶ್ ಎಂಬ ಮೀನುಗಾರಿಕೆ ಬೋಟಿನಲ್ಲಿ ಕೆಲಸ ಮಾಡಿ ಕೊಂಡಿದ್ದು, ಜ.31ರಂದು ರಾತ್ರಿ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರ ಮಧ್ಯೆ ಬೋಟು ಹೋಗುತ್ತಿರುವಾಗ ಅವರು ಆಕಸ್ಮಿಕವಾಗಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

