Home » ಉಡುಪಿ ಬಸ್ ಏಜೆಂಟ್ ಆತ್ಮಹತ್ಯೆ
 

ಉಡುಪಿ ಬಸ್ ಏಜೆಂಟ್ ಆತ್ಮಹತ್ಯೆ

by Kundapur Xpress
Spread the love

ಉಡುಪಿ : ಮನೆಯ ಸಮೀಪದ ಬಾವಿಗೆ ಹಾರಿ ಬಸ್ ಏಜೆಂಟ್ ಕೆ. ರಾಜೇಶ್ ಶೆಣೈ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬನ್ನಂಜೆ ಗರಡಿ ಸಂಪರ್ಕಿಸುವ ರಸ್ತೆ ಸಮೀಪ ಬುಧವಾರ ನಡೆದಿದೆ.

ಸಮಾಜಸೇವಕ ಈಶ್ವರ್ ಮಲ್ಪೆ ತಂಡದವರು ಕಾರ್ಯಾಚರಣೆ ಮೂಲಕ ಶವವನ್ನು ಬಾವಿಯಿಂದ ಮೇಲೆತ್ತಿದರು. ಶವವನ್ನು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಸಹಕರಿಸಿದರು. ನಗರ ಪೋಲಿಸ್ ಠಾಣೆಯ ಎಸ್. ಐ ನಾರಾಯಣ, ಹೆಡ್ ಕಾನ್ಸೆಬಲ್‌ ನೇತಾವತಿ ಕಾನೂನು ಪ್ರಕ್ರಿಯೆ ನಡೆಸಿದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

 

Related Articles

error: Content is protected !!