Home » ಎಲ್‌ಎಸ್‌ಡಿ ಮಾದಕ ಜಾಲ ಪತ್ತೆ : ನಾಲ್ಕನೇ ಆರೋಪಿಯ ಬಂಧನ, 2 ಕೆ.ಜಿ.ಗೂ ಅಧಿಕ ಗಾಂಜಾ ವಶ
 

ಎಲ್‌ಎಸ್‌ಡಿ ಮಾದಕ ಜಾಲ ಪತ್ತೆ : ನಾಲ್ಕನೇ ಆರೋಪಿಯ ಬಂಧನ, 2 ಕೆ.ಜಿ.ಗೂ ಅಧಿಕ ಗಾಂಜಾ ವಶ

by Kundapur Xpress
Spread the love

ಮಣಿಪಾಲ : ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ದಾಖಲಾಗಿರುವ NDPS ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ನಾಲ್ಕನೇ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಮೊಹಮ್ಮದ್ ಅಜ್ಮಲ್ (26), ತಂದೆ ದಿ. ಅಬ್ದುಲ್ ರಶೀದ್, ಚಕ್ಕಿಂಗಿಂಲ್ ತೋಡಿ ಹೌಸ್, ಕೊಡೂರು ಅಂಚೆ, ಚೆಟ್ಟಿಪರಂಬ ಗ್ರಾಮ, ಮಲ್ಲಪುರಂ ಜಿಲ್ಲೆ, ಕೇರಳ ರಾಜ್ಯ ಮೂಲದವನಾಗಿದ್ದು, ಪ್ರಸ್ತುತ ಮಣಿಪಾಲದ ಪ್ರೀಮಿಯಂ ಪಾರ್ಕ್ ಅಪಾರ್ಟ್‌ಮೆಂಟ್, ಫ್ಲಾಟ್ ನಂ.201ರಲ್ಲಿ ವಾಸವಾಗಿದ್ದನು.

ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ದಿನಾಂಕ 04/02/2026 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿಯ ಮಾಕ್ಸ್ ಶೋರೂಂ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆತನ ವಶದಿಂದ ಸುಮಾರು ರೂ.1 ಲಕ್ಷ ಮೌಲ್ಯದ 2084 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣದಲ್ಲಿ ಈಗಾಗಲೇ ಆಪ್ಶಿನ್ ಹಾಗೂ ಶಿವನಿಧಿ ಆಚಾರ್ಯ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಶದಿಂದ ಒಟ್ಟು 1237 ಗ್ರಾಂ ಗಾಂಜಾ, 0.038 ಗ್ರಾಂ ಎಲ್‌ಎಸ್‌ಡಿ ಸ್ಲಿಪ್ಸ್, ಡಿಜಿಟಲ್ ತೂಕ ಯಂತ್ರ, ಖಾಲಿ ಪ್ಲಾಸ್ಟಿಕ್ ಕವರ್‌ಗಳು, ಮೊಬೈಲ್ ಫೋನ್‌ಗಳು ಹಾಗೂ ರೂ.2000 ನಗದು ಹಣ ವಶಪಡಿಸಿಕೊಳ್ಳಲಾಗಿತ್ತು.

ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದೇ ವೇಳೆ, ನಾಲ್ಕನೇ ಆರೋಪಿಯಿಂದ ಗಾಂಜಾ ಪಡೆದು ಸೇವಿಸಿದ್ದ ಐದು ಜನರನ್ನು ವಶಕ್ಕೆ ಪಡೆದು, ಅವರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

 

Related Articles

error: Content is protected !!