Home » ಮನೆಯ ಬಾಗಿಲು ಒಡೆದು ಇನ್ವರ್ಟರ್ ಬ್ಯಾಟರಿ ಕಳ್ಳತನ
 

ಮನೆಯ ಬಾಗಿಲು ಒಡೆದು ಇನ್ವರ್ಟರ್ ಬ್ಯಾಟರಿ ಕಳ್ಳತನ

by Kundapur Xpress
Spread the love

ಕಾರ್ಕಳ: ಮನೆಯ ಬಾಗಿಲು ಒಡೆದು ಇನ್ವರ್ಟರ್ ಬ್ಯಾಟರಿ ಕಳ್ಳತನವಾದ ಘಟನೆ ವರದಿ. ಬೋಳ ಗ್ರಾಮದ ಬೋಳಕೋಡಿ ಕುದುರೆಬೆಟ್ಟು ನಿವಾಸಿ ಸೆಲಿನ್ ಡಿಸೋಜ ಅವರು ಅನಾರೋಗ್ಯವಿದ್ದ ಕಾರಣ ನ. 30ರಂದು ಚಿಕಿತ್ಸೆಗಾಗಿ ತನ್ನ ಮಗಳ ಮನೆ ಮಂಗಳೂರಿಗೆ ಹೋಗಿದ್ದರು.

ಮನೆಯಲ್ಲಿ ಯಾರೂ ಇಲ್ಲದಿರುವ ಸಮಯ ಕಳ್ಳರು ಮನೆಯ ಬಾಗಿಲು ಒಡೆದು ಅಡುಗೆ ಕೋಣೆಯ ನೀರಿನ ಸ್ಟೀಲ್ ಟ್ಯಾಪನ್ನು ಮತ್ತು ಹಾಲ್‌ನಲ್ಲಿದ್ದ ಲುಮಿನಾಸ್ ಕಂಪೆನಿಯ ಇನ್ವರ್ಟರ್ ಬ್ಯಾಟರಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಕಳವಾದ ಸೊತ್ತುಗಳ ಮೌಲ್ಯ ರೂ.12,000 ಅಂದಾಜಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

 

Related Articles

error: Content is protected !!