ಉಡುಪಿ : ಕ್ಷುಲ್ಲಕ ಕಾರಣವೊಂದಕ್ಕೆ ಕುಡಿದ ಮತ್ತಿನಲ್ಲಿ ತನ್ನ ಸ್ನೇಹಿತನ ಕತ್ತನ್ನೇ ಸೀಳಿ ಕೊಲೆಗೈದ ಭೀಕರ ಘಟನೆ ಉಡುಪಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ
ಉಡುಪಿಯ ಹಳೆ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡಿನ ಬಳಿಯ ಕೃಷ್ಣ ಕೃಪಾ ಬಿಲ್ಡಿಂಗನ ಕೊಠಡಿಯಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟ 32 ವರ್ಷ ಪ್ರಾಯದ ಪ್ರಶಾಂತ್ ಗುಡಿಕಾರ್ ಎಂದು ತಿಳಿದುಬಂದಿದೆ ಈತ ಉಡುಪಿ ಕೊರಂಗ್ರಪಾಡಿಯ ನಿವಾಸಿಯಾಗಿದ್ದಾನೆ
ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ನಿವಾಸಿ ಈರಣ್ಣ ಯಾನೆ ದಿನೇಶ ಹಾಗೂ ಉಡುಪಿ ಕೊರಂಗ್ರಪಾಡಿಯ ನಿವಾಸಿ ಪ್ರಶಾಂತ್ ಗುಡಿಗಾರ್ ಎಂಬುವರು ಸ್ನೇಹಿತರಾಗಿದ್ದು ಕಂಠಪೂರ್ತಿ ಕುಡಿದಿದ್ದರು ಮಾತಿಗೆ ಮಾತು ಬೆಳೆದು ಜಗಳವು ವಿಕೋಪಕ್ಕೆ ಹೋಗುತ್ತಿದ್ದಂತೆ ಈರಣ್ಣ ಯಾನೆ ದಿನೇಶ ಎಂಬವನು ಹರಿತವಾದ ಚೂರಿಯಿಂದ ಪ್ರಶಾಂತ್ ಗುಡಿಗಾರನ ಕತ್ತನ್ನೇ ಸೀಳಿದ್ದಾನೆ ಇದರಿಂದ ಪ್ರಶಾಂತ್ ಗುಡಿಗಾರ್ ನೆಲಕ್ಕೆ ಉರುಳಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ ಕೊಲೆ ಮಾಡಿದ ಈರಣ್ಣ ಯಾನೆ ದಿನೇಶ್ ತಕ್ಷಣ ಪೊಲೀಸರಿಗೆ ಕರೆ ಮಾಡಿ ತಾನು ಈ ಕೃತ್ಯ ಎಸೆಗಿರುವುದಾಗಿ ತಿಳಿಸಿರುತ್ತಾನೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಈರಣ್ಣನನ್ನು ಬಂಧಿಸಿದ್ದಾರೆ
ಘಟನಾ ಸ್ಥಳಕ್ಕೆ ಎಸ್ಪಿ ಡಾ ಅರುಣ್ ಕೆ, ಎ ಎಸ್ಪಿ ಸಿದ್ದಲಿಂಗಪ್ಪ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿದ್ದಾರೆ.ಮೇಲ್ನೋಟಕ್ಕೆ ಕ್ಷುಲ್ಲಕ ಕಾರಣಕ್ಕಾಗಿ ಕೊಲೆ ನಡೆದಿದೆ ಎಂದು ತಿಳಿದು ಬಂದ್ದಿದ್ದು ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ