Home ಬ್ರೇಕಿಂಗ್ ನ್ಯೂಸ್ಸಂಗಮ್ ಜಂಕ್ಷನ್‌ ನಲ್ಲಿ ಟ್ಯಾಂಕರ್‌ ಪಲ್ಟಿ

ಸಂಗಮ್ ಜಂಕ್ಷನ್‌ ನಲ್ಲಿ ಟ್ಯಾಂಕರ್‌ ಪಲ್ಟಿ

by Kundapur Xpress

ಸಂಗಮ್ ಜಂಕ್ಷನ್‌ ನಲ್ಲಿ ಟ್ಯಾಂಕರ್‌ ಪಲ್ಟಿ

ಕುಂದಾಪುರ:ನಗರದ ಸಂಗಮ್‌ ಜಂಕ್ಷನ್ ನಲ್ಲಿ‌ ಸಂಜೆ 6.30ರ ಸುಮಾರಿಗೆ ಬೈಂದೂರು ಕಡೆಯಿಂದ ಅತಿ ವೇಗದಿಂದ ಬಂದ ಸಿಮೆಂಟ್‌ ತುಂಬಿದ ಟ್ಯಾಂಕರ್‌ ಸಂಗಮ್‌ ಜಂಕ್ಷನ್‌ ನಲ್ಲಿ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಲ್ಲಿ ಪಲ್ಟಿಯಾಗಿ ಉಡುಪಿ ಕಡೆಯಿಂದ ಬರುತ್ತಿದ್ದ ಮಾರುತಿ ಝೆನ್‌ ಕಾರಿಗೆ ಡಿಕ್ಕಿ ಹೊಡೆಯಿತುನಾವುಂದ ನಿವಾಸಿಯಾದ ನರಸಿಂಹ ರವರಿಗೆ ಸೇರಿದ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು ಅದೃಷ್ಟವಶಾತ್‌ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಟ್ಯಾಂಕರ್‌ ಪಲ್ಟಿಯಾದ ರಭಸಕ್ಕೆ ಟ್ಯಾಂಕರ್‌ ನಲ್ಲಿದ್ದ ಸಿಮಂಟ್ ರಸ್ತೆ ತುಂಬಾ ಚೆಲ್ಲಿ ಬಿದ್ದಿದೆ ಟ್ಯಾಂಕರ್‌ ಬಿದ್ದಿದ್ದರಿಂದ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿ ಸಂಪೂರ್ಣವಾಗಿ ವಾಹನ ಸಂಚಾರ ನಿಲುಗಡೆಯಾಗಿದೆ

ಎರಡೆರಡು ಕ್ರೇನ್‌ ಸಹಾಯದಿಂದ ಬಿದ್ದ ಟ್ಯಂಕರ್‌ ನ್ನು ಎತ್ತಲು ಪೋಲಿಸರು ಹರಸಾಹಸ ಪಡುತ್ತಿದ್ದಾರೆ ಸ್ಥಳದಲ್ಲಿ ನೂರಾರು ಮಂದಿ ಜಮಾವಣೆ ಆಗಿದ್ದಾರೆ

 

Related Articles

Leave a Comment

This site uses Akismet to reduce spam. Learn how your comment data is processed.