ಕುಂದಾಪುರ :. ಶಾಸ್ತ್ರಿ ಸರ್ಕಲ್ ಬಳಿಯ ಜೆ.ಕೆ. ಟವರ್ಸ್‌ನಲ್ಲಿ ಬಂಟರ ಕ್ರೆಡಿಟ್ ಸಹಕಾರಿ ಸಂಘವನ್ನು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಉದ್ಘಾಟಿಸಿ ಮಾತನಾಡಿದರು.
ಸಮಾರಂಭವನ್ನು ಉದ್ಘಾಟಿಸಿದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಸ್ರೂರು ಅಪ್ಪಣ್ಣ ಹೆಗ್ಡೆಯವರು ಕುಂದಾಪುರದಲ್ಲಿ ಈವರೆಗೆ ಬಂಟರ ಸಹಕಾರಿ ಸಂಸ್ಥೆ ಇರಲಿಲ್ಲ ಇಲ್ಲಿ ಆರಂಭವಾದ ಸಂಘ ಉನ್ನತ ಮಟ್ಟಕ್ಕೆ ಹೋಗಲಿ ಎಂದು ಶುಭ ಹಾರೈಸಿದರು.
ಭದ್ರತಾ ಕೊಠಡಿ, ಗಣಕಯಂತ್ರ, ಅಧ್ಯಕ್ಷರ ಕೊಠಡಿ ಉದ್ಘಾಟನೆಯನ್ನು ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ ರೈ ಮಾಲಾಡಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಆವರ್ಸೆ ವಹಿಸಿ, ಸಂಘದ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದರು.
ದ.ಕ ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಂ. ಮಹೇಶ್ ಹೆಗ್ಡೆ ಗಿಳಿಯಾರು ಕುಶಲ ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ. ಉದಯಕುಮಾರ್ ಹೆಗ್ಡೆ, ಯುವ ಬಂಟರ ಸಂಘದ ಅಧ್ಯಕ್ಷ ನಿತೀಶ್ ಶೆಟ್ಟಿ ಬಸ್ರೂರು, ಸಿಇಒ ಸಂಪತ್ ಕುಮಾರ್ ಶೆಟ್ಟಿ ಆರ್ಡಿ, ನಿರ್ದೇಶಕರಾದ ಸಂಜೀವ್ ಶೆಟ್ಟಿ ಸಂಪಿಗೇಡಿ, ಸಂಪತ್ ಕುಮಾರ್ ಶೆಟ್ಟಿ ಕಾವ್ರಾಡಿ, ಅಶೋಕ್ ಕುಮಾರ್ ಶೆಟ್ಟಿ ಸಂಸಾಡಿ, ಕೆ. ರಮೇಶ್ ಶೆಟ್ಟಿ ಗುಲ್ವಾಡಿ, ಕಿರಣ್ ಹೆಗ್ಡೆ ಅಂಪಾರು, ಸುಪ್ರೀತಾ ದೀಪಕ್ ಕುಮಾರ್ ಶೆಟ್ಟಿ ಆನಂದ್ ಶೆಟ್ಟಿ ಆವರ್ಸೆ, ಪ್ರಕಾಶ್ ಚಂದ್ರ ಶೆಟ್ಟಿ ಚಿತ್ತೂರು, ಸುನಿಲ್ ಕುಮಾರ್ ಶೆಟ್ಟಿ ಹೇರಿಕುದ್ರು, ಉದಯ ಕುಮಾರ್ ಶೆಟ್ಟಿ ಮಚ್ಚಟ್ಟು ಉಪಸ್ಥಿತರಿದ್ದರು. ಉಪಾಧ್ಯಕ್ಷ ಸೀತಾರಾಮ ಶೆಟ್ಟಿ ಕೆದೂರು ಸ್ವಾಗತಿಸಿ, ನಿರ್ದೇಶಕ ವಿಕಾಸ್ ಹೆಗ್ಡೆ ಕೊಳ್ಕೆರೆ ಪ್ರಸ್ತಾವಿಸಿ, ಉಪನ್ಯಾಸಕ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕಮ ನಿರೂಪಿಸಿದರು

