Home » ಕೆ.ತಾರಾನಾಥ ಹೊಳ್ಳ ಗೆಳೆಯರ ಬಳಗದ ಅಧ್ಯಕ್ಷರಾಗಿ ಪುನರಾಯ್ಕೆ
 

ಕೆ.ತಾರಾನಾಥ ಹೊಳ್ಳ ಗೆಳೆಯರ ಬಳಗದ ಅಧ್ಯಕ್ಷರಾಗಿ ಪುನರಾಯ್ಕೆ

by Kundapur Xpress
Spread the love

ಕೋಟ : ಗೆಳೆಯರ ಬಳಗ ಕಾರ್ಕಡ ಇದರ 37ನೇ ವಾರ್ಷಿಕ ಮಹಾಸಭೆಯು ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಳಗದ ಅಧ್ಯಕ್ಷ ಕೆ . ತಾರಾನಾಥ ಹೊಳ್ಳರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಜರಗಿತು.

ಸಭೆಯ ವಾರ್ಷಿಕ ವರದಿಯನ್ನು ಬಳಗದ ಕಾರ್ಯದರ್ಶಿ ಕೆ. ಶೀನ ಹಾಗೂ ಅಡಿಟ್ ಮಾಡಿದ 2024-2025ರ ಆಯ ವ್ಯಯವನ್ನು ಕೋಶಾಧಿಕಾರಿ ಕೆ. ನಾಗರಾಜ ಉಪಾಧ್ಯ ಸಭೆಯಲ್ಲಿ ಮಂಡಿಸಿದರು.

ಇದೇ ವೇಳೆ ಕಾರ್ಯಕಾರಿಣಿ ಸಭೆಯಲ್ಲಿ ಕೆ. ತಾರಾನಾಥ ಹೊಳ್ಳ ಬಳಗದ ಅಧ್ಯಕ್ಷರನ್ನಾಗಿ ಪುನರಾಯ್ಕೆಗೊಳಿಸಲಾಯಿತು.

ಉಪಾಧ್ಯಕ್ಷರಾಗಿ ಕೆ. ಶಶಿಧರ ಮಯ್ಯ.ಕಾರ್ಯದರ್ಶಿಯಾಗಿ ಕೆ. ನಾಗರಾಜ ಉಪಾಧ್ಯ,ಜೊತೆ ಕಾರ್ಯದರ್ಶಿ ಕೆ. ಜಗದೀಶ ಆಚಾರ್ಯ,ಖಜಾಂಚಿ ಕೆ. ಶೀನಕಾರ್ಯಕಾರಿ ಸಮಿತಿಯ ಸದಸ್ಯರಾಗಿ . ಕೆ. ಚಂದ್ರಕಾAತ ನಾಯರಿ, ಕೆ. ಶ್ರೀ ಕಾಂತ ಐತಾಳ ,ಕೆ. ಶ್ರೀಪತಿ ಆಚಾರ್ಯ, ಕೆ. ತಮ್ಮಯ್ಯ, ಕೆ.ಉದಯ ಐತಾಳ, ಕೆ. ರಾಘವೇಂದ್ರ ದೇವಾಡಿಗ, ಕೆ. ಶೇಖರ, ಕೆ. ರಘ ಭಂಡಾರಿ ಇವರುಗಳು ಆಯ್ಕೆ ಮಾಡಲಾಯಿತು.

 

Related Articles

error: Content is protected !!