Home » ಕುಂದಾಪುರ ರೋಟರಿ ಕ್ಲಬ್ ದಕ್ಷಿಣ ಅಧ್ಯಕ್ಷರಾಗಿ ಸಚಿನ್‌ ನಕ್ಕತ್ತಾಯ ಆಯ್ಕೆ
 

ಕುಂದಾಪುರ ರೋಟರಿ ಕ್ಲಬ್ ದಕ್ಷಿಣ ಅಧ್ಯಕ್ಷರಾಗಿ ಸಚಿನ್‌ ನಕ್ಕತ್ತಾಯ ಆಯ್ಕೆ

by Kundapur Xpress
Spread the love

ಕುಂದಾಪುರ : ಕುಂದಾಪುರ ರೋಟರಿ ಕ್ಲಬ್ ದಕ್ಷಿಣ ಅಧ್ಯಕ್ಷರಾಗಿ ಸಚಿನ್‌ ನಕ್ಕತ್ತಾಯ ಆಯ್ಕೆಯಾಗಿದ್ದಾರೆ ಕಾರ್ಯದರ್ಶಿಯಾಗಿ ಜೆರಾಲ್ಡ್ ಕ್ರಾಸ್ಪೋ ನೇಮಕಗೊಂಡಿದ್ದಾರೆ

ಕುಂದಾಪುರ ರೋಟರಿ ಕ್ಲಬ್ ದಕ್ಷಿಣ ಇದರ ನೂತನ ತಂಡದ ಪದಗ್ರಹಣ ಸಮಾರಂಭವು ಜುಲೈ 10 ರಂದು ಭಂಡಾ‌ರ್ ಕಾರ್ಸ್ ಕಾಲೇಜು ಆವರಣದ ಕುಂಭಾಶಿ ರಾಧಾಭಾಯಿ ವೆಂಕಟ್ರಮಣ ಪ್ರಭು ರಂಗ ಮಂದಿರದಲ್ಲಿ ನಡೆಯಲಿದೆ.

2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣಕ್ಕೆ ಸಮಾರಂಭಕ್ಕೆ ಅಧಿಕಾರಿಯಾಗಿ ರೋಟರಿ ಪ್ರಾದೇಶಿಕ ಸಾರ್ವಜನಿಕ ಚಿತ್ರಣ ಸಂಯೋಜಕ, ಉದ್ಯಮಿ ಅಭಿನಂದನ್ ಎ. ಶೆಟ್ಟಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ. ಆಯುರ್ವೇದ ಕಾಲೇಜು, ಕಾಲೇಜು, ಆಸ್ಪತ್ರೆ ಮತ್ತು – ಸಂಶೋಧನಾ ಕೇಂದ್ರ ಉಡುಪಿಯ ಉಪ ಪ್ರಾಂಶುಪಾಲ ಪ್ರೊ. ಡಾ. ನಿರಂಜನ್ ಎ. ರಾವ್, ವಲಯ ಸಹಾಯಕ ಗವರ್ನರ್ ಐ. ನಾರಾಯಣ್, ವಲಯ ಲೆಫ್ಟಿನೆಂಟ್ ಕೌಶಿಕ್ ಯಡಿಯಾಳ್ ಉಪಸ್ಥಿತರಿರುತ್ತಾರೆ.

ಕಳೆದ ಸಾಲಿನ ಅಧ್ಯಕ್ಷೆ ಜುಡಿತ್ ಮೆಂಡೋನ್ನಾ ಕಾರ್ಯದರ್ಶಿ ಭರತ್ ಶೆಟ್ಟಿ ಅವರು ನೂತನ ಅಧ್ಯಕ್ಷ ಕೆ.ಸಚಿನ್ ನಕ್ಕತ್ತಾಯ, ಕಾರ್ಯದರ್ಶಿ ಜೆರಾಲ್ಡ್ ಕ್ರಾಸ್ಪೋ ಅವರಿಗೆ ಅಧಿಕಾರಿ ಹಸ್ತಾಂತರ ಮಾಡಲಿದ್ದಾರೆ

 

Related Articles

error: Content is protected !!