ಮರವಂತೆ : ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ನಿ ಮರವಂತೆ ಇದರ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ನಾವುಂದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಮತಿ ಸವಿತಾ ಖಾರ್ವಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಶ್ರೀನಿವಾಸ ಅಡಿಗ ಬಂದಂತಹ ಸದಸ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಾನ್ನಾಡಿ ಸಂಘದ ತ್ವರಿತಗತಿಯ ಬೆಳವಣಿಗೆ ಬಗ್ಗೆ ವಿವರವಾಗಿ ವಿವರಿಸಿದರು ಕು.ಚೈತ್ರಾ ಹಿಂದಿನ ಮಹಾಸಭೆ ನಡವಳಿಕೆಯನ್ನು ಓದಿ ಹೇಳಿದರು,ಸಂಘದ ಲೆಕ್ಕಿಗೆ ಶ್ರೀಮತಿ ರೇಖಾರವರು ನಿವ್ವಳ ಲಾಭದ ವಿಂಗಡಣೆ ಮತ್ತು ಮುಂದಿನ ಸಾಲಿನ ಅಂದಾಜು ಆಯ-ವ್ಯಯ ಪಟ್ಟಿ ಬಜೇಟ್ ಮಂಜುರಾತಿಯನ್ನು ಓದಿ ಹೇಳಿದರು.
ಸಂಘದ ಅಧ್ಯಕ್ಷೆ ಶ್ರೀಮತಿ ಸವಿತಾ ಖಾರ್ವಿ ಅಧ್ಯಕ್ಷರ ಭಾಷಣ ಮಾಡುತ್ತಾ ಸಂಘದ ತ್ವರಿತ ಬೆಳವಣಿಗೆ, ಲಾಭಾಂಶ,ಧೀರ್ಘಾವಧಿ ಗೃಹಸಾಲ ಚಿನ್ನಾಭರಣ ಸಾಲ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಮೊಗವೀರ ನಾವುಂದ ನಿರ್ದೇಶಕರುಗಳಾದ ಶ್ರೀಮತಿ ಶೈಲಾ ಖಾರ್ವಿ, ಮರದಂತೆ,ಶ್ರೀಮತಿ ಗಿರಿಜ ಖಾರ್ವಿ ಮರವಂತೆ,ಶ್ರೀಮತಿ ಆಶಾ ಉಳ್ಳೂರು ಶ್ರೀಮತಿ ಸುಜಾತ ಪೂಜಾರಿ ನಾವುಂದ, ಶ್ರೀಮತಿ ಸೀತಾ ಖಾರ್ವಿ ಮರವಂತ, ಶ್ರೀಮತಿ ಮುಕಾಂಬು ಖಾರ್ವಿ ಬಡಾಕೆರೆ, ಶ್ರೀಮತಿ ನಬಿಸಾ ನಾವುಂದ ಉಪಸ್ಥಿತರಿದ್ದರು, ಕೊನೆಯಲ್ಲಿ ಕು.ಹರ್ಷ ರವರಿಂದ ಧನ್ಯವಾದವಿತ್ತರು.ಕು.ಛಾಯೆ ರ ಪ್ರಾರ್ಥನೆಯೊಂದಿಗೆ ಸಭೆಯು ಆರಂಭವಾಯಿತು.