ಕುಂದಾಪುರ : ನಗರದ ಶ್ರೀ ಮೈಲಾರೇಶ್ವರ ಯುವಕ ಮಂಡಲ ವತಿಯಿಂದ 2025 ಫೆಬ್ರುವರಿಯಲ್ಲಿ ನಡೆಯುವ ಶಿವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ಶ್ರೀ ಮೈಲಾರೇಶ್ವರ ದೇವಸ್ಥಾನದಲ್ಲಿ ಜರುಗಿತು ಶಿವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಮೈಲಾರೇಶ್ವರ ದೇವರ ಪಾದಕಮಲದಲ್ಲಿ ಇಟ್ಟು ಪೂಜಿಸಲಾಯಿತು ನಂತರ ಆಮಂತ್ರಣ ಪತ್ರಿಕೆಯನ್ನು ಸಂಘದ ಹಿರಿಯ ಹಾಗೂ ಗೌರವಾಧ್ಯಕ್ಷರಾದ ಶ್ರೀಯುತ ಜಿ ಆರ್ ಪ್ರಕಾಶ್ ಬಿಡುಗಡೆಗೊಳಿಸಿದರು ಈ ಸಂದರ್ಭದಲ್ಲಿ ಯುವಕಮಂಡಲದ ಅಧ್ಯಕ್ಷರಾದ ಶರತ್ ಕುಮಾರ್ ಕಾರ್ಯದರ್ಶಿ ಶ್ರೀನಾಥ್ ಕೋಟೆ ಹಾಗೂ ನಾಗರಾಜ್ ಅರುಣ್ ಬಾಣ ರಮೇಶ್ ಪ್ರಭು ಗಣೇಶ್ ನಾಯಕ್ ಲಕ್ಷ್ಮೀನಾರಾಯಣ ಗಾಣಿಗ ಪ್ರದೀಪ್ ಕೆ ಆರ್ ಜನಾರ್ಧನ್ ಕೆ ಮುಂತಾದವರು ಉಪಸ್ಥಿತರಿದ್ದರು