ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‍ರೈಸ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಆಸಾಂಕ್ರಾಮಿಕ ರೋಗಗಳ ಘಟಕ, ಅರೋಗ್ಯ ಮತ್ತು ಕ್ಷೇಮ ಕೇಂದ್ರ ವಡೆರಹೋಬಳಿ ಕುಂದಾಪುರ ಇವರ ಜಂಟಿ ಸಹಯೋಗದಲ್ಲಿ. ಯು.ಬಿ.ಎಂ.ಸಿ. ಶಾಲೆ ಕುಂದಾಪುರದಲ್ಲಿ “ತಾಯಿ ಮತ್ತು ಮಕ್ಕಳ ಆರೋಗ್ಯ ಶಿಬಿರ” ಜರುಗಿತು. ರೋಟರಿ ಅಧ್ಯಕ್ಷ ರೋ. ನಾಗರಾಜ ನಾಯ್ಕ್ ಶಿಬಿರ ಉದ್ದೇಶಿಸಿ ಮಾತನಾಡಿದರು. ಮುಖ್ಯ ಅತಿಥಿ ಫಾದರ್ ಇಮ್ಯಾನುಲ್ ಜೈಕರ್ ಮಾತನಾಡಿ ರೋಟರಿಯ ಸೇವೆಯನ್ನು ಶ್ಲಾಘಿಸಿದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಡಾ| ಅವಿನಾಶ ಶೆಟ್ಟಿ, ಡಾ| ಶ್ರಾವ್ಯ ಮಕ್ಕಳ ಆರೋಗ್ಯ ಕುರಿತು ಮಾಹಿತಿ ನೀಡಿದರು. ರಕ್ತಪರೀಕ್ಷಕ ಅಧಿಕಾರಿ ನವೀನ ಡಿಸೋಜ ಹಾಗೂ ಸಿಬ್ಬಂದಿ ವರ್ಗ, ರೋಟರಿ ಕಾರ್ಯದರ್ಶಿ ರೋ. ಪ್ರಶಾಂತ ಹವಾಲ್ದಾರ್, ಮಾಜಿ ರೋಟರಿ ವಲಯ ಸೇನಾನಿ ರೋ. ಪೂರ್ಣಿಮಾ ಭವಾನಿ ಶಂಕರ, ಹಿರಿಯ ಸದಸ್ಯರಾದ ರೋ. ಕೆ. ಎಚ್. ಚಂದ್ರಶೇಖರ, ರೋ. ಗೀತಾ ಮುಕುಂದನ್, ಅಂಗನವಾಡಿ ಶಿಕ್ಷಕಿ ಶ್ರೀಮತಿ ವಿದ್ಯಾಲಕ್ಷ್ಮೀ, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.