Home » ವಿಶ್ವ ಛಾಯಾಗ್ರಾಹಣ ದಿನಾಚರಣೆ
 

ವಿಶ್ವ ಛಾಯಾಗ್ರಾಹಣ ದಿನಾಚರಣೆ

by Kundapur Xpress
Spread the love

ಬ್ರಹ್ಮಾವರ : ರೋಟರಿ ಕ್ಲಬ್ ಬ್ರಹ್ಮಾವರ ಹಾಗೂ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ. ಉಡುಪಿ ಜಿಲ್ಲೆ ಬ್ರಹ್ಮಾವರ ವಲಯದ ವತಿಯಿಂದ ವಿಶ್ವ ಛಾಯಾಗ್ರಾಹಣ ದಿನಾಚರಣೆ ಬ್ರಹ್ಮಾವರದ ರೋಟರಿ ಭವನದಲ್ಲಿ ಆಚರಿಸಲಾಯಿತು
ರೋಟರಿ ಬ್ರಹ್ಮಾವರದ ಅಧ್ಯಕ್ಷರಾದ ರೊ. ಶ್ರೀಧರ್ ಶೆಟ್ಟಿಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು ಮಾಜಿ ಅಧ್ಯಕ್ಷರು ಹಾಗೂ ವೃತ್ತಿ ಸೇವಾ ನಿರ್ದೇಶಕರಾದ ರೊ. ಆರೂರು ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿ ಛಾಯಾಗ್ರಾಹಣ ವೃತ್ತಿಯ ಪ್ರಾಮುಖ್ಯತೆ ಹಾಗೂ ಸಂಘಟನೆಯ ಮಹತ್ವದ ಬಗ್ಗೆ ಬಹಳ ಸುಂದರವಾಗಿ ವಿವರಿಸಿದರು ಛಾಯಾಗ್ರಾಹಕ ಸಂಘದ ಅಧ್ಯಕ್ಷರಾದ ಆಲ್ವಿನ್ ಅಂದ್ರಾದೆ ಇವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು
ಈ ಸಂದರ್ಭದಲ್ಲಿ SKPA ಇತಿಹಾಸದಲ್ಲಿ ಪ್ರಥಮ ವಲಯಾಧ್ಯಕ್ಷೆ ಬೆಳ್ತಂಗಡಿ ವಲಯದ ಅಧ್ಯಕ್ಷರಾದ ಸಿಲ್ವಿಯಾ ಕೊರ್ಡೇರೊ ಹಾಗೂ ಮಂಗಳೂರು ವಲಯದ ಸ್ನೇಹಜೀವಿ ಹಿರಿಯ ಛಾಯಾಗ್ರಾಹಕ ನೋರ್ಬರ್ಟ್ ಕ್ರಾಸ್ತ ಹಾಗೂ ಬ್ರಹ್ಮಾವರ ವಲಯದ ಸದಸ್ಯರ ಪ್ರೀತಿ ಪಾತ್ರರಾದ ಹಿರಿಯ ಛಾಯಾಗ್ರಾಹಕ ನಿತ್ಯಾನಂದ ಕೆ. ಇವರನ್ನು ಸನ್ಮಾನಿಸಲಾಯಿತು ಈ ಎರಡು ಸಂಘಟನೆಗಳು ಆಯೋಜಿಸಿದ್ದ ರೀಲ್ಸ್ ಸ್ಪರ್ಧೆಯ ಬಹುಮಾನ ವಿತರಣೆ ಬಾರ್ಕುರು ರೋಟರಿ ಅಧ್ಯಕ್ಷರಾದ ಗಣೇಶ್ ಶೆಟ್ಟಿಯವರು ನೆರವೇರಿಸಿದರು ರೋಟರಿ ಅಧ್ಯಕ್ಷರಾದ ಶ್ರೀಧರ್ ಶೆಟ್ಟಿಯವರು ಛಾಯಾಗ್ರಾಹಣ ವೃತ್ತಿಯ ಮಹತ್ವ ಹಾಗೂ ಬ್ರಹ್ಮಾವರ ವಲಯದ ಸಂಘಟನೆ ಬಗ್ಗೆ ಮನಮುಟ್ಟುವಂತೆ ಮಾತನಾಡಿದರು..
ವೇದಿಕೆಯಲ್ಲಿ ರೋಟರಿ ಬ್ರಹ್ಮಾವರದ ಕಾರ್ಯದರ್ಶಿ ಉದಯ್ ಪೂಜಾರಿ, ಬ್ರಹ್ಮಾವರ ಛಾಯಾಗ್ರಾಹಕ ಸಂಘದ ಗೌರವಧ್ಯಕ್ಷರಾದ ರಾಘವೇಂದ್ರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಪ್ರಥೀಶ್ ಕುಮಾರ್, ಛಾಯಾ ಕಾರ್ಯದರ್ಶಿ ಪ್ರದೀಪ್ ಊಪ್ಪುರು ವೇದಿಕೆಯಲ್ಲಿ ಉಪಸ್ಥಿತರಿದ್ದರು

 

Related Articles

error: Content is protected !!