Home » ರೋಟರಿ ಕೋಟ ಸಿಟಿ ಅಧ್ಯಕ್ಷರಾಗಿ ಪ್ರಕಾಶ್ ಹಂದಟ್ಟು ಆಯ್ಕೆ
 

ರೋಟರಿ ಕೋಟ ಸಿಟಿ ಅಧ್ಯಕ್ಷರಾಗಿ ಪ್ರಕಾಶ್ ಹಂದಟ್ಟು ಆಯ್ಕೆ

by Kundapur Xpress
Spread the love

ಕೋಟ: ರೋಟರಿ ಕ್ಲಬ್ ಕೋಟ-ಸಿಟಿ ಇದರ 2025-26ನೇ ಸಾಲಿನ ಅಧ್ಯಕ್ಷರಾಗಿ ಉದ್ಯಮಿ, ಕೋಟತಟ್ಟು ಗ್ರಾ.ಪಂ. ಸದಸ್ಯ ಪ್ರಕಾಶ್ ಹಂದಟ್ಟು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಕೋಡಿ ಗ್ರಾ.ಪಂ. ಸದಸ್ಯ ಕೃಷ್ಣ ಪೂಜಾರಿ ಕಾರ್ಯ ನಿರ್ವಹಿಸಲಿದ್ದಾರೆ.

ಬ್ರಹ್ಮಾವರದ ಆಶ್ರಯ ಹೋಟೆಲ್‌ನ ಆನಂದ್ ಬಾಂಕ್ಯಟ್ ಸಭಾಂಗಣದಲ್ಲಿ ಪದಪ್ರದಾನ ನೆರವೇರಲಿದೆ.ವಿಶ್ವವಿದ್ಯಾನಿಲಯದ ನಿವೃತ್ತ ಉಪ ಕುಲಪತಿ ಡಾ. ತನ್ಮಯ್ ಗೋಸ್ವಾಮಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ಸಹಾಯಕ ಗವರ್ನರ್ ಶ್ಯಾಮ್‌ಸುಂದರ್ ನಾಯಿರಿ, ಹಿರಿಯ ರೋಟರಿ ಸದಸ್ಯರಾದ ಸತೀಶ್ ಶೆಟ್ಟಿ ವಲಯ ಸೇನಾನಿ ರವೀಂದ್ರ ಶೆಟ್ಟಿ ಹಾಗೂ ಹಿಂದಿನ ಸಾಲಿನ ಅಧ್ಯಕ್ಷ ಅನಿಲ್ ಸುವರ್ಣ, ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಉಪಸ್ಥಿತರಿರುವರು ಎಂದು ರೋಟರಿ ಪ್ರಕಟನೆ ತಿಳಿಸಿದೆ.

 

Related Articles

error: Content is protected !!