165
ಕುಂದಾಪುರ : ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ಯುವ ಕೊಳಲು ಕಲಾವಿದ ಶ್ರೀ ಕೃಷ್ಣ ರೇವಣ್ಕರ್ ಅವರ ಸಂಗೀತ ಕ್ಷೇತ್ರದ ಸಾಧನೆಗಳನ್ನು ಗೌರವಿಸಿ ಅವರ ಅಸಾಧಾರಣ ಪ್ರತಿಭೆ ಮತ್ತು ಸಮರ್ಪಣೆಯನ್ನು ಗುರುತಿಸಿ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷ ರೊ. ಸಚಿನ್ ನಕ್ಕತ್ತಾಯ ಮತ್ತು ಕಾರ್ಯದರ್ಶಿ ರೊ. ಜೆರಾಲ್ಡ್ ಕ್ರಾಸ್ತಾ ಉಪಸ್ಥಿತರಿದ್ದರು. ರೇವಣ್ಕರ್ ಅವರ ಸಾಧನೆಗಳನ್ನು ವಿವರಿಸುವ ಸನ್ಮಾನ ಪತ್ರವನ್ನು ರೊ. ರಾಮಾನಂದ್ ಕರಣ್ತ್ ವಾಚಿಸಿದರು. ನಂತರ ರೊ. ವಿವಿಯನ್ ಕ್ರಾಸ್ತಾ ಮತ್ತು ರೊ. ಶಾಂತಾರಾಮ್ ನಾಯಕ್ ಅವರು ಗೌರವವನ್ನು ಅರ್ಪಿಸಿದರು. ಈ ಸನ್ಮಾನವು, ಸ್ಥಳೀಯ ಸಮುದಾಯದಲ್ಲಿ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ರೊಟರಿ ಕ್ಲಬ್‌ನ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ರೊಟರಿ ಕ್ಲಬ್ ಕುಂದಾಪುರ ದಕ್ಷಿಣದ ಅಧ್ಯಕ್ಷ ರೊ. ಸಚಿನ್ ನಕ್ಕತ್ತಾಯ ತಿಳಿಸಿದ್ದಾರೆ

