ಕುಂದಾಪುರ : ನಗರದ ಚಿಕ್ಕನಸಾಲು ರಸ್ತೆಯಲ್ಲಿರುವ ರಾಜ್ಯ ಪ್ರಶಸ್ತಿ ವಿಜೇತ ಶ್ರೀ ಮೈಲಾರೇಶ್ವರ ಯುವಕ ಮಂಡಲದ ವಾರ್ಷಿಕೋತ್ಸವವು ನಾಳೆ ಬುಧವಾರ ಜರುಗಲಿದೆ
ಶಿವರಾತ್ರಿ ಮಹೋತ್ಸವದ ಅಂಗವಾಗಿ 48ನೇ ಸಂಭ್ರಮದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಮೈಲಾರೇಶ್ವರ ಯುವಕ ಮಂಡಲವು ನಾಳೆ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ
ನಾಳೆ ಬೆಳಿಗ್ಗೆ ಶ್ರೀ ಮೈಲಾರೇಶ್ವರ ದೇಗುಲದಲ್ಲಿ ಯುವಕ ಮಂಡಲ ವತಿಯಿಂದ ದೀಪಾಲಂಕಾರ ಹೂವಿನ ಅಲಂಕಾರ ಹಾಗೂ ಶತರುದ್ರಾಭಿಷೇಕ ನಡೆಯಲಿದೆ
ಸಂಜೆ ಭಜನೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ ಆಗಲಿದ್ದು ಸೀನಿಯರ್ ಮತ್ತು ಜೂನಿಯರ್ ವಿಭಾಗದಲ್ಲಿ ಚುಕ್ಕಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ
ಸಂಜೆ 6:00ರಿಂದ ನೃತ್ಯ ಕಾರ್ಯಕ್ರಮ ಹಾಗೂ ಸಂಜೆ 7:30ಕ್ಕೆ ಸಭಾ ಕಾರ್ಯಕ್ರಮ ನಂತರ ಸ್ಟಾರ್ ನೈಟ್ ಮಂಗಳೂರು ಇವರಿಂದ ಸಂಗೀತ ರಸಮಂಜರಿ ಜರುಗಲಿದೆ ಎಂದು ಶ್ರೀ ಮೈಲಾರೇಶ್ವರ ಯುವಕ ಮಂಡಲದ ಅಧ್ಯಕ್ಷ ಶರತ್ ಕುಮಾರ್ ಹಾಗೂ ಕಾರ್ಯದರ್ಶಿ ಶ್ರೀನಾಥ್ ಕೋಟೆ ತಿಳಿಸಿದ್ದಾರೆ

