Home » ಭಾರತ ಜಗತ್ತಿನ ಶ್ರೀಮಂತ ದೇಶ
 

ಭಾರತ ಜಗತ್ತಿನ ಶ್ರೀಮಂತ ದೇಶ

- ಬಿ ಕಿಶೋರ್‌ ಕುಮಾರ್

by Kundapur Xpress
Spread the love

ಕುಂದಾಪುರ : ವಿವಿಧ ಜಾತಿ ಮತ ಪಂಗಡ ಭಾಷೆಯಿದ್ದರೂ ಭಾರತೀಯ ಸಂಸ್ಕ್ರತಿ ಪರಂಪರೆಯಿಂದ ಅನೇಕತೆಯಲ್ಲಿ ಎಕತೆಯನ್ನು ಸಾಧಿಸಿ ಸಂಸ್ಕಾರಯುತ ಜೀವನ ಮೌಲ್ಯದಿಂದಾಗಿ ಭಾರತ ಇಂದಿಗೂ ಜಗತ್ತಿನ ಶ್ರೀಮಂತ ದೇಶವಾಗಿದ್ದು ಶ್ರೀಮಂತ ದೇಶಕ್ಕೆ ಕೇವಲ ಆರ್ಥಿಕತೆ ಮಾತ್ರ ಮಾನದಂಡವಾಗಿರದೇ ತನ್ನ ಮೌಲ್ಯಯುತ ಶಿಕ್ಷಣ ಸಂಸ್ಕಾರಗಳಿಂದ ಭಾರತ ಶ್ರೇಷ್ಠ ದೇಶವಾಗಿದ್ದು ಇಲ್ಲಿ ಜನಿಸಿದ ನಾವೇ ಧನ್ಯರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್‌ ಕುಮಾರ್‌ ನುಡಿದರು

ಅವರು ನಗರದ ಚಿಕ್ಕಮ್ಮನ ಸಾಲು ರಸ್ತೆಯ ಮೈಲಾರೇಶ್ವರ ಯುವಕ ಮಂಡಲದ 47 ನೇ ವಾರ್ಷೀಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರಾಣುಮಕ್ಕಿ ನಾಗ ಬೊಬ್ಬರ್ಯ 25ನೇ ವರ್ಷದ ಸಮಿತಿಯ ಅಧ್ಯಕ್ಷರಾದ ಕೆ ಆರ್‌ ಕಾಶಿನಾಥ್‌ ಉದ್ಯಮಿಗಳಾದ ವಿಜಯ್‌ ಪೂಜಾರಿ ವೆಂಕಟೇಶ್‌ ಬೆಟ್ಟಿನ್‌ ಪ್ರಭಾಕರ್‌ ನೇರಂಬಳ್ಳಿ ಶ್ರೀ ಮೈಲಾರೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರಮೇಶ್‌ ಬಿಲ್ಲವ ಶ್ರೀ ಮೈಲಾರೇಶ್ವರ ಯುವಕ ಮಂಡಲದ ಅಧ್ಯಕ್ಷರಾದ ಜಿ ಆರ್‌ ಪ್ರಕಾಶ್‌ ಕಾರ್ಯದರ್ಶಿ ಮಧುಕರ್‌ ಕೆ ಗೌರವಾಧ್ಯಕ್ಷರಾದ ಸುಧೀರ್‌ ಹಾಗೂ ಕುಂದಾಪುರ ರಾಮಕ್ಷತ್ರಿಯರ ಸಂಘದ ಕಾರ್ಯದರ್ಶಿಗಳಾದ ಶಂಕರ್‌ ಶೇರಿಗಾರ್‌ ಹಾಡಿಮನೆ ಉಪಸ್ಥಿತರಿದ್ದರು

ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ ಶ್ರೀಮತಿ ವಿಶಾಲಾಕ್ಷಿ ಯು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗಾಗಿ ಕುಮಾರಿ ಪೂರ್ವಿ ಎನ್‌ ನಾಯ್ಕ್‌ ರವರನ್ನು ಸನ್ಮಾನಿಸಲಾಯಿತು

ಡಿ ಸತೀಶ್‌ ಹಾಗೂ ವರದಾ ಪೈ ನಿರೂಪಿಸಿದ ಕಾರ್ಯಕ್ರಮದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಜಿ ಆರ್‌ ಪ್ರಕಾಶ್‌ ಸ್ವಾಗತಿಸಿ ಕಾರ್ಯದರ್ಶಿ ಮಧುಕರ್‌ ಕೆ ಧನ್ಯವಾದವಿತ್ತರು ಶಂಕರ್‌ ಶೇರಿಗಾರ್‌ ಹಾಡಿಮನೆ ಶುಭಾಶಂಸನೆಗೈದರು  

   

Related Articles

error: Content is protected !!