ಕೋಟ : ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಕೋಡಿ ಕನ್ಯಾಣ ಇದರ 2024-2029 ನೇ ಸಾಲಿಗೆ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು ಸಂಸ್ಥೆಯ ಅಧ್ಯಕ್ಷರಾಗಿ ಶಂಭು ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಮಹಾಬಲ ಕುಂದರ್ ಕೋಡಿ ಕನ್ಯಾಣ ಇವರು ಅವಿರೋಧವಾಗಿ ಮುಂದಿನ ಅವಧಿಗೆ ಆಯ್ಕೆಯಾದರು. ಸಂಸ್ಥೆಯ ಚುನಾವಣಾ ಪ್ರಕ್ರಿಯೆಯಲ್ಲಿ ಅಧಿಕಾರಿಗಳಾಗಿ ಕೆ.ಎಸ್.ಜಗದೀಶ್ ಭಾಗವಹಿಸಿ ಘೋಷಿಸುವುದರೊಂದಿಗೆ ಅಭಿನಂದನೆಗಳನ್ನು ಸಲ್ಲಿಸಿದರು