Home » ರಾಯಲ್‌ ಕ್ಲಬ್:ಯೋಗ ದಿನಾಚರಣೆ
 

ರಾಯಲ್‌ ಕ್ಲಬ್:ಯೋಗ ದಿನಾಚರಣೆ

by Kundapur Xpress
Spread the love

ಕುಂದಾಪುರ: ರೋಯಲ್ ಕ್ಲಬ್ ಕುಂದಾಪುರ, ಸೀನಿಯರ್ ಚೇಂಬರ್ ಇಂಟರ್‍ನ್ಯಾಷನಲ್ ಕುಂದಾಪುರ ಹಾಗೂ ಯೋಗಬಂಧು ಕುಂದಾಪುರ ಇವರ ಜಂಟಿ ಸಹಯೋಗದಲ್ಲಿ ಕುಂದಾಪುರ ಚಿಕ್ಕನ್‍ಸಾಲ್ ರಸ್ತೆಯಲ್ಲಿರುವ ರೋಯಲ್ ಕ್ಲಬ್ ಸಭಾಂಗಣದಲ್ಲಿ “ವಿಶ್ವ ಯೋಗ ದಿನಾಚರಣೆ”ಯನ್ನು ಆಚರಿಸಲಾಯಿತು.

ರೋಯಲ್ ಕ್ಲಬ್‍ನ ಅಧ್ಯಕ್ಷ ಪ್ರಶಾಂತರವರ ಸ್ವಾಗತ ಭಾಷಣದೊಂದಿಗೆ ಪ್ರಾರಂಭಗೊಂಡು, ಯೋಗ ಗುರು ಯೋಗಬಂಧು ಶ್ರೀ ಸಂಜೀವಣ್ಣರವರು ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಲಾಯಿತು. ಸೀನಿಯರ್ ಛೇಂಬರ್ ಅಧ್ಯಕ್ಷ ಶಿವಾನಂದ ಎಂ.ಪಿ. ಮಾತನಾಡಿ, ಯೋಗ ದಿನದಂದು ಎಲ್ಲರಿಗೂ ಶುಭಾಶಯ ಕೋರಿದರು. ರೋಯಲ್ ಕ್ಲಬ್‍ನ ಪದಾಧಿಕಾರಿ ಗಣೇಶ ಬೆಟ್ಟಿನ್ ಹಾಗೂ ಸದಸ್ಯರು, ಯೋಗಬಂಧು ಸದಸ್ಯ ಭಾಸ್ಕರ ಗಾಣಿಗ, ಸಾರ್ವಜನಿಕರು. ಮಕ್ಕಳು ಯೋಗದಲ್ಲಿ ಪಾಲ್ಗೊಂಡು ಯೋಗ ಮಾಡುವುದರೊಂದಿಗೆ ಇದರ ಮಹತ್ವವನ್ನು ಅರಿತು ಮುಂದಿನ ದಿನಗಳಲ್ಲಿ ನಿರಂತರವಾಗಿ ಯೋಗ ಮಾಡುವ ಪ್ರತಿಜ್ಞೆ ಕೈಗೊಂಡರು. ಪ್ರಕಾಶ ಕೆ. ವಂದಿಸಿದರು.

   

Related Articles

error: Content is protected !!