ನವದೆಹಲಿ: ಲೋಕಸಭೆ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲೇ ಪ್ರಧಾನಿ ಮೋದಿ ಅವರು ಅಡುಗೆ ಅನಿಲ ಸಿಲಿಂಡರ್ ದರವನ್ನು 100 ರು. ಕಡಿತಗೊಳಿಸಿದ್ದಾರೆ. ಮಹಿಳಾ ದಿನ ಹಾಗೂ ಶಿವರಾತ್ರಿ ಸಂಭ್ರಮದ ದಿನವಾದ ಶುಕ್ರವಾರದಂದೇ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ.
ಕೇಂದ್ರ ಸರ್ಕಾರದ ದರ ಕಡಿತ ನಿರ್ಧಾರದಿಂದಾಗಿ 14.2 ಕೆ.ಜಿ. ತೂಕದ ಅಡುಗೆ ಅನಿಲ ಸಿಲಿಂಡರ್ ಇನ್ನು ಮುಂದೆ 805 ರೂಪಾಯಿಗೆ ಲಭ್ಯವಾಗಲಿದೆ. ಉಜ್ವಲಾ ಫಲಾನುಭವಿಗಳಿಗೆ ಈಗಾಗಲೇ 300 ರು. ಸಬ್ಸಿಡಿ ಇರುವ ಕಾರಣ ಅವರಿಗೆ 505 ರೂಪಾಯಿಗೆ ಸಿಲಿಂಡರ್ ದೊರೆಯಲಿದೆ