ಹೆಬ್ರಿ : ಕಬ್ಬಿನಾಲೆ-ಮುನಿಯಾಲು ರಸ್ತೆಯ ಮತ್ತಾವು ಸಮೀಪದಲ್ಲಿರುವ ಹೊನ್ನೆಗುಂಡಿ ಜಲಪಾತಕ್ಕೆ ಸ್ನಾನಕ್ಕೆಂದು ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ ಮೃತಪಟ್ಟವರನ್ನು ಇಂಜೀನಿಯರಿಂಗ್ ವಿದ್ಯಾರ್ಥಿ ಪ್ರಸ್ತುತ್ ಹೆಗ್ಡೆ (21ವರ್ಷ) ಹಾಗೂ ಕರ್ಜೆ ನಿವಾಸಿಯಾದ ಉಮೇಶ್ ಕುಮಾರ್ (45 ವರ್ಷ) ಎಂದು ತಿಳಿದು ಬಂದಿದೆ
ಇಬ್ಬರು ಸ್ನೇಹಿತರು ಸ್ನಾನಕ್ಕೆಂದು ತೆರಳಿದ್ದು ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ