93
ಕಾಪು : ಎಂ.ಆರ್.ಪಿ.ಎಲ್ ಮಂಗಳೂರುನಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ ಇದರ ಶೌಚಾಲಯ ನಿರ್ಮಾಣಕ್ಕೆ ಸಿ.ಎಸ್.ಆರ್ ಫಂಡ್ ನಿಂದ 25 ಲಕ್ಷ ರೂಪಾಯಿ ಮಂಜುರಾಗಿದ್ದು ಶೌಚಾಲಯ ಕಟ್ಟಡ ಕಾಮಗಾರಿಗೆ ದಿನಾಂಕ 26-05-2025 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಬಿ.ಎಲ್ ವಿಶ್ವಾಸ್, ಸದಸ್ಯರಾದ ಅಶೋಕ್ ಜೋಗಿ, ಪ್ರಾಂಶುಪಾಲರಾದ ಮಂಜುನಾಥ್ ಭಟ್, ಉಪ ಪ್ರಾಂಶುಪಾಲರಾದ ಪ್ರಕಾಶ್ ಪ್ರಭು, ಉಪನ್ಯಾಸಕಿ ಶ್ರೀಮತಿ ಜಯಶ್ರೀ, ಶಿಕ್ಷಕರಾದ ರವೀಂದ್ರ ಪ್ರಭು ಹಾಗೂ ಗುತ್ತಿಗೆದಾರರಾದ ಪ್ರಥ್ವಿ ಶೆಟ್ಟಿ ಉಪಸ್ಥಿತರಿದ್ದರು.

