Home » 3 ಕೆ.ಜಿ. ತೂಕದ ತಾಮ್ರದ ಕಲಶ ಪತ್ತೆ
 

3 ಕೆ.ಜಿ. ತೂಕದ ತಾಮ್ರದ ಕಲಶ ಪತ್ತೆ

by Kundapur Xpress
Spread the love

ಕುಂದಾಪುರ : ಬೈಂದೂರು ತಾಲೂಕಿನ ಪಡುವರಿ ಗ್ರಾಮದ ಸೋಮೇಶ್ವರ ಸಮುದ್ರ ತೀರದಲ್ಲಿ ದೇವಸ್ಥಾನದ ಗೋಪುರಕ್ಕೆ ಅಳವಡಿಸುವ ಸುಮಾರು 3 ಕೆ.ಜಿ. ತೂಕದ ತಾಮ್ರದ ಕಲಶ ಪತ್ತೆಯಾಗಿದೆ.

ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸಪೆಕ್ಟರ್ ವಸಂತ ರಾಮ ಆಚಾ‌ರ್, ಉಪನಿರೀಕ್ಷಕ ಸುಬ್ರಹ್ಮಣ್ಯ ಎಚ್ ಸಿಬ್ಬಂದಿಗಳಾದ ಯುವರಾಜ್‌, ರಾಘವೇಂದ್ರ ದೇವಾಡಿಗ ಹಾಗೂ ಗೃಹರಕ್ಷಕ ದಳದ ನಾಗೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಸಮುದ್ರ ತೀರದಲ್ಲಿ ಪತ್ತೆಯಾದ ತಾಮದ್ರ ಕಲಶವನ್ನು ವಶಪಡಿಸಿಕೊಂಡಿದ್ದಾರೆ.

ಕಲಶದ ವಾರೀಸುದಾರರು ಇದ್ದಲ್ಲಿ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್‌ ಠಾಣೆಯನ್ನು ಅಥವಾ ಮೊಬೈಲ್ ನಂಬ್ರ 9480800580 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ

 

Related Articles

error: Content is protected !!