Home » ಐದು ದಿನಗಳ ತರಬೇತಿ ಯಶಸ್ವಿ
 

ಐದು ದಿನಗಳ ತರಬೇತಿ ಯಶಸ್ವಿ

ಪಿಎಂ ವಿಶ್ವಕರ್ಮ ಯೋಜನೆ

by Kundapur Xpress
Spread the love

ಕೋಟ : ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬಿದ್ಕಲ್‌ಕಟ್ಟೆ ಇಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ ಬುಟ್ಟಿ ತಯಾರಿಸುವ ಹಿಡಿಸುಡಿ ತಯಾರಿಸುವ ತೆಂಗು ನಾರಿನ ಮ್ಯಾಟ್ ಚಾಪೆ ತಯಾರಿಸುವ ಐದು ದಿನಗಳ ತರಬೇತಿ ಯಶಸ್ವಿಯಾಗಿ ಇತ್ತೀಚಿಗೆ ನೆರವೇರಿತು.
ಬೈಂದೂರು, ಹೆಮ್ಮಾಡಿ, ಬ್ರಹ್ಮಾವರ ,ಗೋಳಿಅಂಗಡಿ, ಹಾಲಾಡಿ, ಸಿದ್ದಾಪುರ ,ಕೋಟೇಶ್ವರ, ತೆಕ್ಕಟ್ಟೆ ,ಉಪುö್ಪಂದ ಕಾಲ್ತೊಡು, ಕಂಬದಕೋಣೆ, ಕಟ್ಬೆಲ್ತೂರ್ ಹೀಗೆ ನಾನಾ ಕಡೆಗಳಿಂದ ಆಗಮಿಸಿದ ಫಲಾನುಭವಿಗಳು ತರಬೇತಿಯಲ್ಲಿ ಭಾಗಿಯಾದರು.
ಅಲ್ಲದೆ ಸುಸಜ್ಜಿತವಾದ ಹಾಗೂ ಉಪಕರಣಗಳನ್ನು ತರಬೇತಿ ಕೋಣೆಗಳನ್ನ ಒದಗಿಸಿದ ಸಂಸ್ಥೆ ಕೌಶಲ್ಯ ತರಬೇತಿಯನ್ನು ನೀಡಲು ದೀಪ ಜಪ್ತಿ, ಬಗೆ ಬಗೆಯ ಬುಟ್ಟಿಗಳನ್ನು ತಯಾರಿಸುವ ತರಬೇತಿಯನ್ನು ನೀಡಲಾಯಿತು.
ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಆಚಾರ್ಯ ಸ್ವಂತ ಉದ್ಯೋಗದ ಕುರಿತು ಮಾಹಿತಿ ತರಬೇತಿ ನೀಡಿದರು.
ಪ್ರಾಚಾರ್ಯರಾದ ಗಂಗಾಧರಪ್ಪ ನೇತೃತ್ವದಲ್ಲಿ ಪಿಎಂಎA ವಿಶ್ವಕರ್ಮ ಸಂಯೋಜಕರಾದ ಗಣೇಶ್.ಎಚ್ ಹಾಗೂ ಮನೋಜ್ ಹಾಗೂ ಎನ್‌ಎಸ್‌ಡಿಸಿ ಯ ಸಂಧ್ಯಾರಾಣಿ ಹಾಗೂ ಅಜಿತ್ ಆಚಾರ್ಯ ಸಹಕಾರದಲ್ಲಿ ಯಶಸ್ವಿ ತರಬೇತಿ ನಡೆಯಿತು.

 

Related Articles

error: Content is protected !!