Home » ಬಸ್‌ನಲ್ಲಿ ಸಾಗಿಸುತ್ತಿದ್ದ 401 ಗ್ರಾಂ ತೂಕದ 32 ಚಿನ್ನದ ಬಳೆ ಹಾಗೂ 50 ಲಕ್ಷ ರೂ ನಗದು
 

ಬಸ್‌ನಲ್ಲಿ ಸಾಗಿಸುತ್ತಿದ್ದ 401 ಗ್ರಾಂ ತೂಕದ 32 ಚಿನ್ನದ ಬಳೆ ಹಾಗೂ 50 ಲಕ್ಷ ರೂ ನಗದು

by Kundapur Xpress
Spread the love

ಭಟ್ಕಳ: ಮುಂಬೈನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಸಾಗಿಸುತ್ತಿದ್ದ 401 ಗ್ರಾಂ ತೂಕದ 32 ಚಿನ್ನದ ಬಳೆ ಹಾಗೂ 50 ಲಕ್ಷ ರೂ ನಗದನ್ನು ಭಟ್ಕಳದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಬಸ್ ನಲ್ಲಿ ಪರಿಶೀಲನೆ ನಡೆಸಿದಾಗ ಸೂಟ್‌ಕೇಸ್‌ನಲ್ಲಿ ಚಿನ್ನ ಮತ್ತು ನಗದು ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸಿದೆ.

ಮುಂಬೈನಲ್ಲಿ ಬಸ್‌ ಚಾಲಕನ ಕೈಗೆ ಅನಾಮಿಕ ವ್ಯಕ್ತಿ ಸೂಟ್‌ಕೇಸ್ ನೀಡಿದ್ದಾನೆ. ಮಂಗಳೂರು ಬಸ್ ನಿಲ್ದಾಣದಲ್ಲಿ ಸೂಟ್‌ಕೇಸ್ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದ. ಬಸ್ ಸಂಖ್ಯೆ ಹೇಳುತ್ತೇನೆ, ನಮ್ಮವರು ಬಂದು ಪಡೆಯುತ್ತಾರೆ. ಇರ್ಫಾನ್ ಎಂಬವರಿಗೆ ಸೂಟ್‌ಕೇಸ್ ಕೊಡುವಂತೆ ಹೇಳಿದ್ದ ಎಂಬ ಮಾಹಿತಿ ಲಭಿಸಿದೆ.

ಅನುಮಾನದ ಹಿನ್ನೆಲೆ ಭಟ್ಕಳದಲ್ಲಿ ಬಸ್ಸನ್ನು ಪರಿಶೀಲನೆ ನಡೆಸಿದಾಗ ಪೊಲೀಸರ ಕಣ್ಣಿಗೆ ಸೂಟ್‌ಕೇಸ್‌ನಲ್ಲಿ ಸ್ವೀಟ್ ಬಾಕ್ಸ್ ಮಾದರಿಯಲ್ಲಿ ಕಂಡಿದ್ದು, ಅದನ್ನು ಓಪನ್ ಮಾಡಿದಾಗ ಹಣ, ಒಡವೆ ಪತ್ತೆ ಆಗಿವೆ. ಸದ್ಯ ಬಸ್ ಚಾಲಕನಿಂದ ನಗದು ಮತ್ತು ಚಿನ್ನ ವಶಕ್ಕೆ ಪಡೆದಿರುವ ಪೊಲೀಸರು, ಮಾಲೀಕರ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.

 

Related Articles

error: Content is protected !!